ಮಂಗಳೂರು : ಎಸ್ ಡಿಪಿಐ ಹಾಗೂ ಪಿಎಫ್ ಐ ಕಚೇರಿ ಸೇರಿದಂತೆ ನಾಯಕರ ಮನೆ ಮೇಲೆ ಎನ್ ಐ ಎ ದಾಳಿ

Spread the love

ಮಂಗಳೂರು : ಎಸ್ ಡಿಪಿಐ ಹಾಗೂ ಪಿಎಫ್ ಐ ಕಚೇರಿ ಸೇರಿದಂತೆ ನಾಯಕರ ಮನೆ ಮೇಲೆ ಎನ್ ಐ ಎ ದಾಳಿ

ಮಂಗಳೂರು: ಎನ್ ಐ ಎ ಅಧಿಕಾರಿಗಳ ತಂಡ ಮಂಗಳೂರಿನಲ್ಲಿರುವ ಎಸ್ ಡಿಪಿಐ ಹಾಗೂ ಪಿಎಫ್ ಐ ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

ಮಂಗಳೂರು ನಗರದ ಸುತ್ತಮುತ್ತ ಇರುವ ಕಚೇರಿಗಳ ಮೇಲೆ ಏಕಕಾಲಕ್ಕೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ನಲ್ಲೆಕಾಯಿ ರಸ್ತೆ, ಬಜ್ಪೆ, ಕುಳಾಯಿ, ಕಾವೂರು ಸೇರಿದಂತೆ ಹಲವು ತಂಡಗಳಾಗಿ ದಾಳಿ ನಡೆಸಿದೆ. ಮುಂಜಾನೆ ಸುಮಾರು 3;30 ರ ಸುಮಾರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಈ ಸಂಬಂಧ ಪೊಲೀಸರು ನೆಲ್ಲಿಕಾಯಿ ರಸ್ತೆಯನ್ನು ಬಂದ್ ಮಾಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ದಾಳಿ ನಡೆದ ಸ್ಥಳಗಳಲ್ಲಿ ಅರೆಮೀಸಲು ಪಡೆಗಳನ್ನು ನೇಮಿಸಲಾಗಿದೆ.

ಅಧಿಕಾರಿಗಳ ಪಿಎಫ್‌ಐ, ಎಸ್ ಡಿಪಿಐ ಮುಖಂಡರ ಮನೆಗಳ ಮೇಲೂ ದಾಳಿ ನಡೆಸಿದೆ.

ಇತ್ತ ದಾಳಿ ನಡೆಯುತ್ತಿದ್ದಂತೆ ಪಿಎಫ್ ಐ ಕಾರ್ಯಕರ್ತರು ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.


Spread the love

Leave a Reply

Please enter your comment!
Please enter your name here