ಮಂಗಳೂರು: ಕೊರೋನಾ ಸೋಂಕಿನ ಭಯ – ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ

Spread the love

ಕೊರೋನಾ ಸೋಂಕಿನ ಭಯ – ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಕೋವೀಡ್‌ ಸೋಂಕು ತಗಲಿದೆ ಎಂಬ ಆತಂಕದಲ್ಲಿ ದಂಪತಿಗಳಿಬ್ಬರು ನೇಣು ಬಿಗಿದು ಸಾವಿಗೀಡಾದ ಘಟನೆ ಮಂಗಳವಾರ ನಗರದ ಬೈಕಂಪಾಡಿಯಲ್ಲಿ ಸಂಭವಿಸಿದೆ.

ಮೃತರನ್ನು ಬೈಕಂಪಾಡಿಯ ರಹೆಝಾ ಅಪಾರ್ಟ್‌ ಮೆಂಟ್‌ ನಲ್ಲಿ ವಾಸವಾಗಿದ್ದ ಆರ್ಯ ಸುವರ್ಣ ಮತ್ತು ಗುಣ ಸುವರ್ಣ ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಆರ್ಯ ಸುವರ್ಣ ಅವರ ಪತ್ನಿ ಗುಣ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಒಂದು ವಾರದಿಂದ ಇಬ್ಬರಿಗೂ ಕೋವಿಡ್‌ ಸೋಂಕಿನ ಲಕ್ಷಣ ಕಂಡು ಬಂದಿದೆ. ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ನೋಡಿ ಹೆದರಿಕೆಯಾಗಿದ್ದು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಗರ ಪೊಲೀಸ್‌ ಕಮೀಷನರ್‌ ಶಶಿಕುಮಾರ್‌ ಅವರಿಗೆ ಮೊಬೈಲ್‌ ವಾಯ್ಸ್‌ ಮೆಸ್ಸೇಜ್‌ ಕಳುಹಿಸಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಕಮೀಷನರ್‌ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದರು. ಅಲ್ಲದೆ ಇಬ್ಬರ ಪತ್ತೆಗೆ ಮತ್ತು ರಕ್ಷಣೆ ಮಾಡುವಂತೆ ಮಾಧ್ಯಮ ಗ್ರೂಪ್‌ ಗಳಲ್ಲಿ ಅವರು ಮನವಿ ಮಾಡಿದ್ದರು. ಈ ನಡುವೆ ಪೊಲೀಸರು ಕೂಡ ಬೈಕಂಪಾಡಿಯ ರಹೇಜಾ ಅಪಾರ್ಟ್‌ ಮೆಂಟ್‌ ಗೆ ತಲುಪಿದ್ದು ಇಬ್ಬರೂ ಕೂಡ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love