ಮಂಗಳೂರು: ಕೊಳೆತ ಮೊಟ್ಟೆ ಪೂರೈಕೆ – ಗರ್ಭಿಣಿ ಮಹಿಳೆ, ಮಕ್ಕಳು ಅಸ್ವಸ್ಥ

Spread the love

ಮಂಗಳೂರು: ಕೊಳೆತ ಮೊಟ್ಟೆ ಪೂರೈಕೆ – ಗರ್ಭಿಣಿ ಮಹಿಳೆ, ಮಕ್ಕಳು ಅಸ್ವಸ್ಥ

ಮಂಗಳೂರು : ಇತ್ತೀಚೆಗೆ ರಾಜ್ಯದ ಹಲವೆಡೆ ಕೊಳೆತ ಮೊಟ್ಟೆಗಳು ನೀಡಿದ ಆರೋಪ ಕೇಳಿಬಂದಿತ್ತು. ಅದರಂತೆ ಇದೀಗ ಮಂಗಳೂರು ಹೊರವಲಯದ ಕಾಟಿಪಳ್ಳ ಆಸುಪಾಸಿನಲ್ಲಿನ ಅಂಗನವಾಡಿ ಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿದ್ದು, ಆಕಾಶಭವನದಲ್ಲಿ ಗರ್ಭಿಣಿ ಮತ್ತು ಆಕೆಯ ಮಗು ಮೊಟ್ಟೆ ತಿಂದು ಅಸ್ವಸ್ಥರಾದ ಘಟನೆ ನಡೆದಿದೆ.

ಇನ್ನು ಕಳೆದ ತಿಂಗಳು ಮಂಗಳೂರಿನ ಹಲವೆಡೆ ಕೊಳೆತ ಮೊಟ್ಟೆ ಪೂರೈಕೆಯಾಗಿತ್ತು. ಈ ಬಾರಿಯೂ ಕೆಲವು ಕಡೆ ಕೊಳೆತ ಮೊಟ್ಟೆ ಪೂರೈಕೆ ಆಗಿರುವ ಬಗ್ಗೆ ತಿಳಿದು ಬಂದಿದೆ.

ಈ ಬಗ್ಗೆ ಉತ್ತರ ವಿಧಾನ ಸಭಾ ಶಾಸಕ ಭರತ್ ಶೆಟ್ಟಿ ಮಾಧ್ಯಮಕ್ಕೆ ಮಾತನಾಡಿ ಅಧಿಕಾರಿಗಳು ಮೊಟ್ಟೆ ಕಂಟ್ರಾಕ್ಟರ್ ,ಮತ್ತು ಸಂಬಂದ್ಧ ಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ
ಕಳೆದ ತಿಂಗಳು ಮಂಗಳೂರಿನ ಹಲವೆಡೆ ಕೊಳೆತ ಮೊಟ್ಟೆಗಳು ಪೂರೈಕೆಯಾಗಿತ್ತು. ಈ ಬಾರಿಯೂ ಮೊಟ್ಟೆ ಪೂರೈಸುವ ಗುತ್ತಿಗೆದಾರರು ಅಂಗನವಾಡಿಗೆ ಮತ್ತೆ ಕೊಳೆತ ಮೊಟ್ಟೆ ಕೊಟ್ಟಿದ್ದಾರೆ.


Spread the love