
ಮಂಗಳೂರು: ಕ್ಯಾನ್ಸರ್‍ಜಾಗೃತಿಗಾಗಿ, ಯೆನ್‍ರನ್ 2023
ಯೆನೆಪೋಯ ಇನ್‍ಸ್ಟಿಟ್ಯೂಟ್ ಆಫ್‍ಆಂಕೊಲಾಜಿ, ಹಾಗೂ ಎನ್.ಎಸ್.ಎಸ್,ಭಾನುವಾರ ಮಂಗಳೂರಿನ ನೆಕ್ಷಸ್ ಮಾಲ್, ಇಲ್ಲಿಆಯೋಜಿಸಿದ 3 ಮತ್ತು 5 ಕಿ.ಲೋ ಮೀ.ದೂರಓಡುವಯೆನ್‍ರನ್ 2023,ಕಾರ್ಯಕ್ರಮಇತ್ತೀಚೆಗೆನೆರವೇರಿತು.
ಉಪಕುಲಪತಿಡಾ.ಎಂ. ವಿಜಯಕುಮಾರ್‍ಅವರು ಮಾತನಾಡಿ, ಜುಲೇಖಾಯೆನೆಪೋಯ ಇನ್‍ಸ್ಟಿಟ್ಯೂಟ್ ಆಫ್‍ಆಂಕೊಲಾಜಿ (ಟಾಟಾಟ್ರಸ್ಟ್ ಬೆಂಬಲಿತ), ಎನ್.ಎಸ್.ಎಸ್, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರಇವರ ಸಹಯೋಗದಲ್ಲಿ ಬಾಯಿ, ಸ್ತನಗಳಿಗೆ ಸಂಬಂಧ ಪಟ್ಟಂತೆ ಸಾಮಾನ್ಯ ಕ್ಯಾನ್ಸರ್‍ಗಳಿಗೆ ವಿವಿಧಜಾಗೃತಿಕಾರ್ಯ, 2023 ಫೆಬ್ರವರಿ 1 ರಿಂದ 15ನೇ ಮಾರ್ಚ್‍ತನಕ ವಿಶ್ವಕ್ಯಾನ್ಸರ್ ದಿನ ಮತ್ತು ಮಹಿಳಾ ಸ್ವಾಸ್ಥ್ಯಜಾಗೃತಿಗಾಗಿಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವ ವಿದ್ಯಾಲಯದ ವೈದ್ಯರು ಮತ್ತುತಜ್ಞರತಂಡದಿಂದ 19 ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು. ದಕ್ಷಿಣಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ 4400 ಆದಿವಾಸಿಗಳು ಇದರ ಪ್ರಯೋಜನವನ್ನು ಪಡೆದರು. ಮಹಿಳಾ ಕ್ಷೇಮ ಸಂಚಾರಿಆರೋಗ್ಯಘಟಕದ ಮೂಲಕ 80 ಪ್ಯಾಪ್ ಸ್ಮೀಯರ್, 25 ಮ್ಯಾಮೊಗ್ರಾಮ್, 100 ಮೌಖಿಕ ಪರೀಕ್ಷೆಗಳ ನೆರವೇರಿಸುವಿಕೆ. 4,500 ಬುಡಕಟ್ಟುಜನಸಂಖ್ಯೆಯ ಎನ್.ಸಿ.ಡಿ ಸ್ಕ್ರೀನಿಂಗ್ ನಡೆಸುವಿಕೆ. ಇವುಗಳೊಂದಿಗೆ ವಿಶ್ವವಿದ್ಯಾಲಯದಆಶ್ರಯದಲ್ಲಿರಾಜ್ಯದ ಮೂವತ್ತು ಸಾವಿರಕ್ಕೂ ಮಿಕ್ಕಿ ಎನ್.ಎಸ್.ಎಸ್. ಸ್ವಯಂಸೇವಕರಿಗೆ ಮತ್ತುಕಾರ್ಯಕ್ರಮ ಅಧಿಕಾರಿಗಳಿಗೆ ಶಿಕ್ಷಣ ನೀಡುವಉದ್ದೇಶವನ್ನುಕೈಗೊಂಡಿದೆ. ಎಂದರು.
ಎಸಿಪಿ ಗೀತಾಕುಲಕರ್ಣಿಅವರುಜೀವನದಲ್ಲಿ ನಾವು ಮಾಡುವ ಪ್ರತಿಯೊಂದುಕಾರ್ಯದಲ್ಲೂಧೈರ್ಯಇರಬೇಕು ಮತ್ತುಅದೇ ಯಶಸ್ಸಿಗೆ ಕಾರಣಎಂದರು.ಜೊತೆಗೆಜೀವರಕ್ಷಣೆಗೆ ಸಂಚಾರಿ ನಿಯಮ ಪಾಲಿಸಬೇಕೆಂದರು.
ಅಭ್ಯಾಗತರಾಗಿದ್ದಕರ್ನಾಟಕ ಸರ್ಕಾರದಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯಎನ್.ಎಸ್.ಎಸ್. ಅಧಿಕಾರಿಶ್ರೀ ಪ್ರತಾಪ್ ಲಿಂಗಯ್ಯಯೆನೆಪೋಯಆಂಕೊಲಾಜಿ ಸಂಸ್ಥೆ ಕ್ಯಾನ್ಸರ್ನಿಂದ ಬಳಲುತ್ತಿರುವವರನ್ನು ಗುರುತಿಸಿ ಉಚಿತಚಿಕಿತ್ಸೆ ನೀಡುತ್ತಿದೆ. ರಾಜ್ಯ ಮಟ್ಟದಲ್ಲಿಕ್ಯಾನ್ಸರ್‍ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇಂತಹಉತ್ತಮಕಾರ್ಯಕ್ರಮಗಳು ಇತರ ಸಂಸ್ಥೆಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ, ಎಂದರು.
ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವ ವಿದ್ಯಾಲಯದ ಕುಲಪತಿಡಾ. ಯೆನೆಪೋಯಅಬ್ದುಲ್ಲಕುಂಞÂಅಧ್ಯಕ್ಷತೆ ವಹಿಸಿದ್ದರು.
ವಿಶ್ವವಿದ್ಯಾಲಯದರಿಜಿಸ್ಟ್ರಾರ್‍ಡಾ. ಗಂಗಾಧರ ಸೋಮಯಾಜಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಕೋರಿದರು. ನಟಅರ್ಜುನ್‍ಕಾಪಿಕಾಡ್,ಆಸರೆಚಾರಿಟೇಬಲ್ ಟ್ರಸ್ಟ್‍ನಅಧ್ಯಕ್ಷೆ, ಡಾ. ಆಶಾಜ್ಯೋತಿರೈ, ಜಿಲ್ಲಾ ಸಮಗ್ರ ಬುಡಕಟ್ಟುಅಭಿವೃದ್ಧಿಯೋಜನೆಯೋಜನಾ ಸಂಯೋಜಕರಾದ ಶ್ರೀ ರಾಜಶೇಖರ್ ಎ, ದಕ್ಷಿಣಕನ್ನಡ ಮಹಿಳಾ ಮಂಡಲಗಳ ಒಕ್ಕೂಟದಅಧ್ಯಕ್ಷೆ, ಶ್ರೀಮತಿ ಚಂಚಲಾ ತೇಜೋಮಯ, ಹಿದಾಯ ಫೌಂಡೇಶನ್‍ಅಧ್ಯಕ್ಷ ಶ್ರೀ ಮಹಮ್ಮದ್ ಹನೀಫ್, ಡಾ. ಪ್ರಿಯದರ್ಶಿನಿ ರಾ.ಮಿಸೆಸ್ ವಲ್ರ್ಡ್ ಸೂಪರ್ ಮಾಡೆಲ್ ವಿಜೇತೆ, ಯೆನ್‍ರನ್ ಬ್ರಾಂಡ್ ರಾಯಭಾರಿಗಳಾದ ಶ್ರೀಮತಿ ಪ್ರಿಯದರ್ಶಿನಿ, ಅರುಶ್, ಶ್ವೇತಾ ಅರೆಹೊಳೆ ಮೊದಲಾದವರುಮತ್ತುಕ್ಯಾನ್ಸರ್‍ಯೋಧರು ವೇದಿಕೆಯಲ್ಲಿ ಉಪಸ್ಥಿತರಾಗಿದ್ದರು. ವಿಶ್ವವಿದ್ಯಾಲಯದರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದಡಾ. ಆಶ್ವಿನಿ ಶೆಟ್ಟಿ ವಂದಿಸಿದರು.
ಯೆನ್‍ರನ್‍ನಲ್ಲಿ ಸುಮರು 1500 ಜನರು ಭಾಗವಹಿಸಿ, 3 ಮತ್ತು 5 ಕಿ.ಲೋ ಮೀ.ದೂರಓಡಿ ಪ್ರಮಾಣಪತ್ರ ಮತ್ತು ಪದಕಗಳನ್ನು ಪಡೆದರು. ಎರಡು ವಿಭಾಗಗಳ ಉನ್ನತ ಶ್ರೇಣಿಯ ವಿಜೇತಓಟಗಾರರಿಗೆ ವೇದಿಕೆಯಲ್ಲಿಗೌರವ ಪತ್ರದೊಂದಿಗೆ ಪ್ರಶಸ್ತಿ ಪದಕಗಳನ್ನು ನೀಡಿಗೌರವಿಸಲಾಯಿತು.ಅತ್ಯಂತಕಿರಿಯ ಸ್ಪರ್ಧಿಆಯನ್ಶ್‍ಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಯಿತು.