
ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಮಂಗಳೂರು: ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳೂರು ಪರಿಸರದಲ್ಲಿ ಅಕ್ರಮವಾಗಿ ತಂದಿರುವ ಮಾದಕ ವಸ್ತುವಾದ ಗಾಂಜಾವನ್ನು ರಿಕ್ಷಾದಲ್ಲಿ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಮಾದಕ ವಸ್ತುವಾದ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂರು ಜನರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ಅಜೀಜುದ್ದೀನ ರಸ್ತೆ ನಿವಾಸಿ ಗಣೇಶ್(28), ಡೊಂಗರಕೇರಿ ನಿವಾಸಿ ರಾಹುಲ್ ಗಟ್ಟಿ (25), ಕುದ್ರೋಳಿ ನಿವಾಸಿ ಅಭಿಲಾಷ ಎಸ್ ಕರ್ಕೇರಾ (27) ಎಂದು ಗುರುತಿಸಲಾಗಿದೆ.
ಬಂಧಿತರಿಂದ 2 ಕೆಜಿ 133 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟಕ್ಕೆ ಬಳಕೆ ಮಾಡುತ್ತಿದ್ದ ಆಟೋ ರಿಕ್ಷಾ ಸಂಖ್ಯೆ-ಕೆಎ19 ಎಎ2906 ಹಾಗೂ 3 ಮೊಬೈಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 1,36,000/- ಈ ಬಗ್ಗೆ ಬರ್ಕ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯಿದೆ ಅಡಿ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಮಂಗಳೂರು ನಗರ ರವರಾದ ಕುಲದೀಪ್ ಕುಮಾರ್ ಆರ್ ಜೈನ್, ಐ.ಪಿ.ಎಸ್ ರವರ ನೇತೃತ್ವದಲ್ಲಿ, ಡಿಸಿಪಿ (ಕಾ ಸು) ರವರಾದ ಅಂಶುಕುಮಾರ್ ಐ ಪಿ ಎಸ್. ಡಿಸಿಪಿ (ಅಪರಾಧ 8 ಸಂಚಾರ) ರವರಾದ ದಿನೇಶ್ ಕುಮಾ ಕೆ.ಎಸ್.ಪಿ.ಎಸ್ ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ ರವರಾದ ಮಹೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ನಡೆಸಿದ್ದು ಬರ್ಜೆ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಎನ್ ಹಸ್ತ, ರೇಖಾ ಆರ್ ಪಿಎಸ್ಐ, ಶೋಭಾ ಪಿ.ಎಸ್.ಐ ಹಾಗೂ ಬರ್ಕೆ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ 2160 ಚಂದ್ರಹಾಸ ಆಳ್ವ, ಹೆಚ್.ಪಿ 434 ರಾಘವೇಂದ್ರ, ಪಿಸಿ 3101 ಪ್ರದೀಪ, ಪಿಸಿ 3049 ಮಂಜುನಾಥ, ಪಿಸಿ 3194 ಲಿಖಿತ್ ಕುಮಾರ ಮತ್ತು ಪಿಸಿ 341) ನಿಶೇಶ್ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.