ಮಂಗಳೂರು | ಜಿಪಂ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ ಮತ್ತು ಇತರ ತಂತ್ರಾಂಶಗಳನ್ನು ಅನುಷ್ಠಾನಗೊಳಿಸಲು ದ.ಕ.ಜಿಪಂಗೆ ಹೊರಗುತ್ತಿಗೆ ಆಧಾರದ ಮೇಲೆ ಇ-ಪಂಚಾಯತ್ ಯೋಜನೆಯಡಿ ಇ-ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರ (ADPM)ಹುದ್ದೆಯ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಬಿ.ಇ (ಸಿಎಸ್/ಇಸಿ/ಐಎಸ್)/ಎಂಸಿಎ/ಬಿಸಿಎ ವಿದ್ಯಾರ್ಹತೆ ಹೊಂದಿದ 21-40 ವಷರ್ದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಬಂಧಿತ ಕ್ಷೇತ್ರದಲ್ಲಿ 3 ವಷರ್ ಅನುಭವ ಹೊಂದಿರಬೇಕು. ಸಂಭಾವನೆ 30,000 ರೂ. ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಡಿ.20 ಕೊನೆಯ ದಿನವಾಗಿದೆ.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗೆ ದ.ಕ. ಜಿಪಂ ಕಚೇರಿಯ ಅಭಿವೃದ್ದಿ ಶಾಖೆಯನ್ನು ಸಂಪರ್ಕಿಸಬಹುದು ಎಂದು ದ.ಕ.ಜಿಪಂ ಸಿಇಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
