ಮಂಗಳೂರು: ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣದ ಶಂಕಿತ ಆರೋಪಿಯ ಮಾಹಿತಿ ನೀಡಲು ಕೋರಿಕೆ

Spread the love

ಮಂಗಳೂರು: ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣದ ಶಂಕಿತ ಆರೋಪಿಯ ಮಾಹಿತಿ ನೀಡಲು ಕೋರಿಕೆ

ಮಂಗಳೂರು: ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿಯೊಳಗೆ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ಎಂಬವರನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ ಆರೋಪಿಯ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಫೆಬ್ರವರಿ 3 ರಂದು ಸುಮಾರು 3-30 ಗಂಟೆಯಿಂದ 3-45 ಗಂಟೆ ಮಧ್ಯೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠ ರಸ್ತೆಯಲ್ಲಿನ ಮಂಗಳೂರು ಜ್ಯುವೆಲ್ಲರ್ಸ್ ಗೆ ಈ ಕೆಳಕಂಡ ವ್ಯಕ್ತಿಯು ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿಯೊಳಗೆ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ಎಂಬವರನ್ನು ಚೂರಿಯಿಂದ ತಿವಿದು ಕೊಲೆ ಮಾಡಿರುತ್ತಾನೆ.

ಸ್ಥಳೀಯ ಸಿಸಿಟಿವಿಗಳಲ್ಲಿ ದಾಖಲಾದ ಚಿತ್ರಣಗಳಲ್ಲಿ ಸದ್ರಿ ಈ ವ್ಯಕ್ತಿಯ ಭಾವಚಿತ್ರವು ಪತ್ತೆಯಾಗಿದ್ದು, ಸದ್ರಿ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಈ ಕೆಳಕಂಡ ಅಧಿಕಾರಿಯವರ ಮೊಬೈಲ್ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿದಾರರ ವಿವರವನ್ನು ಗೌಫ್ಯವಾಗಿಡಲಾಗುವುದು. [ 1) ಎಸಿಪಿ ಸಿಸಿಬಿ, ಮಂಗಳೂರು ನಗರ – ಪಿ ಎ ಹೆಗಡೆ 9945054333, 2) ಎಸಿಪಿ ಕೆಂದ್ರ ಉಪವಿಭಾಗ, ಮಂಗಳೂರು ನಗರ – ಮಹೇಶ್ ಕುಮಾರ್ -9480805320)]


Spread the love