ಮಂಗಳೂರು: ಜೂ 16 ರ ವಿಶ್ವಹಿಂದೂಪರಿಷತ್-ಭಜರಂಗದಳ ಪ್ರತಿಭಟನೆಗೆ ಅನುಮತಿ ನೀಡಿಲ್ಲ – ನಗರ ಪೊಲೀಸರು

Spread the love

ಮಂಗಳೂರು: ಜೂ 16 ರ ವಿಶ್ವಹಿಂದೂಪರಿಷತ್-ಭಜರಂಗದಳ ಪ್ರತಿಭಟನೆಗೆ ಅನುಮತಿ ನೀಡಿಲ್ಲ – ನಗರ ಪೊಲೀಸರು

ಮಂಗಳೂರು: ಜೂನ್‌ 16ರಂದು ಸಂಜೆ 3.00 ಗಂಟೆಗೆ ಮಂಗಳೂರು ಪಿವಿಎಸ್ ವೃತ್ತದ ಬಳಿ ವಿಶ್ವಹಿಂದೂಪರಿಷತ್-ಭಜರಂಗದಳ ಮಂಗಳೂರು ಇವರ ವತಿಯಿಂದ ಪ್ರತಿಭಟನಾ ಸಭೆಗೆ ಅನುಮತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾದಿಯವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದವರ ವಿರುದ್ಧ ಪ್ರತಿಭಟನೆ ಹೆಸರಿನಲ್ಲಿ ದೇಶದಾಧ್ಯಂತ ಹಿಂಸೆ ನಡೆಸಿರುವುದನ್ನು ಖಂಡಿಸಿ ದಿನಾಂಕ 16.06.2022 ರಂದು ಸಂಜೆ 3.00 ಗಂಟೆಗೆ ಪಿವಿಎಸ್ ವೃತ್ತದ ಬಳಿ ವಿಶ್ವಹಿಂದೂಪರಿಷತ್-ಭಜರಂಗದಳ ಮಂಗಳೂರು ಇವರ ವತಿಯಿಂದ ಪ್ರತಿಭಟನಾ ಸಭೆ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಪ್ರಸಾರವಾಗುತ್ತಿರುವುದು ಕಂಡು ಬಂದಿರುತ್ತದೆ. ಆದರೆ ಈ ಕುರಿತು ಅಧಿಕೃತವಾಗಿ ಅನುಮತಿ ಕೋರಿಕೆ ಪತ್ರವನ್ನು ಸಲ್ಲಿಸಿರುವುದು ಕಂಡು ಬರುವುದಿಲ್ಲ. ಆದಾಗ್ಯೂ ಸಹ ಹಾಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಭದ್ರತೆಯ ಹಿತದೃಷ್ಟಿಯಿಂದ ಯಾವುದೇ ರೀತಿಯ ಪ್ರತಿಭಟನೆಯನ್ನು ಮಾಡಲು ಅನುಮತಿ ನೀಡಿರುವುದಿಲ್ಲವಾಗಿ ಮಾಹಿತಿಯನ್ನು ತಿಳಿಪಡಿಸಲಾಗಿದೆ.


Spread the love