ಮಂಗಳೂರು ಝೋನ್ ಅಂಡರ್ -19 ಕ್ರಿಕೆಟ್ ತಂಡದ ಆಯ್ಕೆಯಲ್ಲಿ ತಾರತಮ್ಯ ಆರೋಪ

Spread the love

ಮಂಗಳೂರು ಝೋನ್ ಅಂಡರ್ -19 ಕ್ರಿಕೆಟ್ ತಂಡದ ಆಯ್ಕೆಯಲ್ಲಿ ತಾರತಮ್ಯ ಆರೋಪ

ಮಂಗಳೂರು: ಕ್ರಿಕೆಟ್ ನಲ್ಲಿ ಮಂಗಳೂರು ವಲಯವನ್ನು ತನ್ನ 12 ನೇ ವಯಸ್ಸಿನಿಂದ ಪ್ರತಿನಿಧಿಸುತ್ತಿರುವ ರವೀಂದ್ ಸುಧೀರ್ ಅವರನ್ನು ಅಂಡರ್ -19 ರ ತಂಡದ ಆಯ್ಕೆಯ ವೇಳೆ ಕಡೆಗಣಿಸಲಾಗಿದೆ ಎಂದು ಗೋವಾದ ಮಾಜಿ ರಣಜಿ ಆಟಗಾರ ದಯಾನಂದ ಬಂಗೇರ ಮತ್ತು ಯುವಕನ ಪೋಷಕರು ಆರೋಪಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು ಕೇವಲ ಕ್ಲಬ್ ಬದಲಾವಣೆಯ ಕಾರಣವನ್ನು ನೀಡಿ ಕೋಚ್ ಹಾಗೂ ಆಯ್ಕೆಯ ಹಿಂದಿನ ಸೂತ್ರಧಾರರು  ಪ್ರತಿಭಾನ್ವಿತ ಆಟಗಾರರಾಗಿರುವ ರವೀಂದ್ ರನ್ನು ಆಯ್ಕೆಯಿಂದ ಕೈ ಬಿಟ್ಟಿದ್ದಾರೆ ಎಂದರು.

ಕ್ರಿಕೆಟ್ ಟೂರ್ನಿಯಲ್ಲೂ ಬೇರೆಯವರಿಗೆ ಅನುಕೂಲವಾಗುವ ಸಲುವಾಗಿ ಬ್ಯಾಟಿಂಗ್ ಮಾಡುವಾಗ ರವೀಂದ್ ಗೆ ಕೇವಲ ಪಿಚ್ ನಲ್ಲಿ ಸ್ಕೋರ್ ಗೆ ಪ್ರಯತ್ನಿಸದೆ ಜತೆ ಆಟಗಾರರಿಗೆ ಜತೆ ನೀಡುವ ಕೆಲಸ ಮಾಡಲು ಸೂಚಿಸುವುದು ಹೇಯಕರವಾಗಿದೆ. ಬೌಲಿಂಗ್ ಸಂದರ್ಬದಲ್ಲೂ ರವೀಂದ್ ಉತ್ತಮ ಬೌಲಿಂಗ್ ಮಾಡಿ ವಿಕೆಟ್ ತೆಗೆದಾಗ ಅವರಿಗೆ ಇಷ್ಟವಾದ ಅಭ್ಯರ್ಥಿಗೆ ಅವಕಾಶ ನೀಡುವುದಕ್ಕಾಗಿ ಬೌಲಿಂಗ್ ನನ್ನು ಹಿಂದೆ ಪಡೆಯಲಾಗುತ್ತಿತ್ತು. ಪ್ರಸಕ್ತ ಆಯ್ಕೆಯಾದ 16 ರ ಬಳಗದಲ್ಲಿ ರವೀಂದ್ ಗೆ ಸಮನಾಗಿ ಇಬ್ಬರೂ ಇಲ್ಲವಾಗಿದ್ದರೂ ಕೂಡ ಅವರಿಗೆ 16 ರ ಬಳಗದಲ್ಲಿ ಅವಕಾಶ ನೀಡಲಾಗಿಲ್ಲ.

ಜಿಲ್ಲಾ ಮಟ್ಟದಲ್ಲಿ ಸೈಂಟ್ ಅಲೋಶಿಯಸ್ ತಂಡದಿಂದ ಕೆನರಾ ಕಾಲೇಜು ಎದುರು 144 ರನ್, ಅಂತರ್ ಜಿಲ್ಲಾ ಮಟ್ಟದಲ್ಲಿ ಕೊಡಗು ರಾಜೇಶ್ವರಿ ಪಿಯು ತಂಡದೆದುರು ಅಜೇಯ 244 ರನ್, ಮಣಿಪಾಲ್ ಪ್ರೌಢಶಾಲೆ ಅತ್ತಾವರ ತಂಡದೆದರು ಬ್ಯಾಟಿಂಗ್ ನಲ್ಲಿ ಅಜೇಯ 219 ರನ್ ಹಾಗೂ ಬೌಲಿಂಗ್ ನಲ್ಲಿ ಯಾವುದೇ ರನ್ ನೀಡದೆ ವಿಕೇಟನ್ನು ಪಡೆದಿರುವ ದಾಖಲೆಯನ್ನು ರವೀಂದ್ ಹೊಂದಿದ್ದಾರೆ ಎಂದು ದಯಾನಂದ್ ಹೇಳಿದರು.

ಆಯ್ಕೆ ಮಾಡಲಾಗಿರುವ ಯುವ ಪ್ರತಿಭೆಗಳಲ್ಲಿ ರವೀಂದ್ ಮಟ್ಟದಲ್ಲಿ ದೈಹಿಕ, ಮಾನಸಿಕ ಕ್ಷಮತೆಯನ್ನು ಹೊಂದಿರುವ ಆಟಗಾರರು ಇದ್ದಲ್ಲಿ ನಾನು ನನ್ನ ಮಗನನ್ನು ಕ್ರಿಕೆಟ್ ನಿಂದ ಹಿಂದಕ್ಕೆ ಕರೆಸುವುದಾಗಿ ಸವಾಲನ್ನು ಕೂಡಾ ಕೋಚ್ ಗೆ ಹಾಕಿದ್ದೇನೆ ಎಂದು ರವೀಂದ್ ತಂದೆ ಸುಧೀರ್ ಬೋಳೂರು ಹೇಳಿದರು.


Spread the love