Home Mangalorean News Kannada News ಮಂಗಳೂರು: ಡಿಜಿಪಿ ಡಾ. ಎಂ.ಎ. ಸಲೀಂರಿಂದ ಪೊಲೀಸ್ ಕಚೇರಿಗೆ ಭೇಟಿ – ಅಧಿಕಾರಿಗಳೊಂದಿಗೆ ಸಭೆ

ಮಂಗಳೂರು: ಡಿಜಿಪಿ ಡಾ. ಎಂ.ಎ. ಸಲೀಂರಿಂದ ಪೊಲೀಸ್ ಕಚೇರಿಗೆ ಭೇಟಿ – ಅಧಿಕಾರಿಗಳೊಂದಿಗೆ ಸಭೆ

Spread the love

ಮಂಗಳೂರು: ಡಿಜಿಪಿ ಡಾ. ಎಂ.ಎ. ಸಲೀಂರಿಂದ ಪೊಲೀಸ್ ಕಚೇರಿಗೆ ಭೇಟಿ – ಅಧಿಕಾರಿಗಳೊಂದಿಗೆ ಸಭೆ

ಮಂಗಳೂರು: ಕರ್ನಾಟಕ ರಾಜ್ಯದ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ, ಐಪಿಎಸ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ವಿವಿಧ ಪೊಲೀಸ್ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಿ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.

ಬಳಿಕ ಅವರು ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರ ಅಹವಾಲುಗಳನ್ನು ಸ್ವೀಕರಿಸಿದರು.

ಇದೇ ವೇಳೆ ಬಂಟ್ವಾಳಕ್ಕೆ ತೆರಳಿ ಡಿ.ಎ.ಆರ್ ಕಚೇರಿಗಾಗಿ ಕಾಯ್ದಿರಿಸಲಾದ ಸ್ಥಳವನ್ನು ಪರಿಶೀಲಿಸಿದರು. ನಂತರ ಪೊಲೀಸ್ ಇಲಾಖೆಯ ಇತರ ಕಚೇರಿಗಳಿಗೆ ಭೇಟಿ ನೀಡಿದರು.


Spread the love

Exit mobile version