ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ 

Spread the love

ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ 

ಮಂಗಳೂರು: ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜೆಪ್ಪು ಭಾರತ್ ಮೈದಾನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು.

ಮಾಜಿ ಶಾಸಕ ಜೆ. ಆರ್. ಲೋಬೊ ರವರು ಧ್ವಜಾರೋಹಣ ನೆರವೇರಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡುತ್ತ, ಹಲವಾರು ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಸ್ವಾತಂತ್ರ್ಯದ ಪೂರ್ವ ಪ್ರತಿಯೊಂದು ವಸ್ತುಗಳು ಹೊರ ದೇಶದಿಂದ ಬರುತಿತ್ತು. ಈಗ ಭಾರತ ದೇಶ ಸ್ವಾವಲಂಬಿಯಾಗಿದೆ. ಅನೇಕ ಕೈಗಾರಿಕೆಗಳು ಬ್ರಹತ್ ಉದ್ಯಮಗಳು ನೆಲೆ ನಿಂತು ಭಾರತ ಈಗ ಸದೃಢವಾಗಿದೆ ಎಂದರು.

ವಿಧಾನಪರಿಷತ್ ನ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜಾ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಟಿ. ಕೆ. ಸುಧೀರ್, ಸದಾಶಿವ ಅಮೀನ್, ಹೊನ್ನಯ್ಯ, ಭಾಸ್ಕರ್ ರಾವ್, ಹಬೀಬುಲ್ಲ ಕಣ್ಣೂರ್,ದುರ್ಗಾ ಪ್ರಸಾದ್, ಸಬಿತಾ ಮಿಸ್ಕಿತ್, ಶೈಲಜಾ, ದಿನೇಶ್ ಪಿ. ಎಸ್., ಸುನೀಲ್ ಪೂಜಾರಿ,ರಮಾನಂದ ಪೂಜಾರಿ,ಹುಸೈನ್ ಬೋಳಾರ,ದೀಕ್ಷಿತ್ ಅತ್ತಾವರ, ಲಾರೆನ್ಸ್ ಡಿಸೋಜಾ,ಹೈದರ್ ಎಮ್ಮೆಕೆರೆ,ಉಮೇಶ್ ದೇವಾಡಿಗ,ಬೆನೆಟ್ ಡಿ ಮೆಲ್ಲೋ, ಅಶೋಕ್ ಕುಡುಪಾಡಿ,ಸವಾನ್ ಜೆಪ್ಪು, ನವಾಜ್, ಸೀತಾರಾಮ್, ಸುನೀಲ್ ದೇವಾಡಿಗ,ಗೀತಾ ಅತ್ತಾವರ, ಪ್ರವೀತ್ ಕರ್ಕೇರ, ಗೀತಾ ಪ್ರವೀಣ್, ಹರ್ಬಟ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.


Spread the love