ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಸೇವಾದಳದ ತರಬೇತಿ ಕಾರ್ಯಾಗಾರ

Spread the love

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಸೇವಾದಳದ ತರಬೇತಿ ಕಾರ್ಯಾಗಾರ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಸೇವಾದಳದ ಒಂದು ದಿನದ ತರಬೇತಿ ಕಾರ್ಯಾಗಾರವು ಇತ್ತೀಚಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನೆರವೇರಿತು.

ಕಾರ್ಯಾಗಾರವನ್ನು ಹಿರಿಯ ಕಾಂಗ್ರೆಸಿಗರಾದ ದೇವೇಂದ್ರರವರು ಸೇವಾದಳದ ಸಂಸ್ಥಾಪಕರಾದ ನಾ. ಸು. ಹರ್ಡಿಕರ್ ರವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಕಾರ್ಯಾಗಾರದ ಶಿಬಿರಾಧಿಪತಿಗಳಾದ ಬಿ. ಪ್ರಭಾಕರ ಶ್ರೀಯಾನ್ ರವರು ಶಾರೀರಿಕ ಶಿಕ್ಷಣ, ಧ್ವಜದ ಇತಿಹಾಸ, ಧ್ವಜ ರಕ್ಷಕನ ಕರ್ತವ್ಯಗಳು, ರಾಷ್ಟ್ರೀಯ ಗೀತೆಗಳ ಬಗ್ಗೆ ಮಾಹಿತಿ ನೀಡಿದರು. ಹರ್ಡಿಕರ್ ಜೀವನ ಚರಿತ್ರೆ ಹಾಗೂ ಕಾಂಗ್ರೆಸ್ ಸೇವಾದಳ ಇತಿಹಾಸದ ಬಗ್ಗೆ ಉದಯ ಕುಂದರ್ ಹಾಗೂ ರಘು ಧರ್ಮಸೇನ್ ಕಾಂಗ್ರೆಸ್ ಪಕ್ಷದ ಇತಿಹಾಸ ಹಾಗೂ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಾಗಾರದಲ್ಲಿ ಮಾಜಿ ಶಾಸಕರಾದ ಜೆ. ಆರ್. ಲೋಬೊ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾದ ಎ. ಸುರೇಶ್ ಶೆಟ್ಟಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಸಲೀಂ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ, ದುರ್ಗಾ ಪ್ರಸಾದ್ ಉಪಸ್ಥಿತರಿದ್ದರು.

ಸುಮಾರು 30 ಶಿಬಿರಾರ್ಥಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಗಾರವನ್ನು ಹೊನ್ನಯ್ಯ. ಟಿ ರವರು ನಿರ್ವಹಣೆಗೈದರು.


Spread the love