ಮಂಗಳೂರು ದಸರಾ ಗೆ ತೆರೆ; ಮೆರವಣಿಗೆಯಿಲ್ಲದೆ ನವದುರ್ಗೆಯರ ವಿಸರ್ಜನೆ

Spread the love

ಮಂಗಳೂರು ದಸರಾ ಗೆ ತೆರೆ; ಮೆರವಣಿಗೆಯಿಲ್ಲದೆ ನವದುರ್ಗೆಯರ ವಿಸರ್ಜನೆ

ಮಂಗಳೂರು: ರಾಜ್ಯದಲ್ಲಿಯೇ ಎರಡನೇ ಅತೀ ದೊಡ್ಡ ದಸರಾ ಎಂದು ಖ್ಯಾತಿ ಪಡೆದಿರುವ ಮಂಗಳೂರು ದಸರಾ ಉತ್ಸವಕ್ಕೆ ಸೋಮವಾರ ಇತಿಹಾಸದಲ್ಲೇ ಮೊದಲ ಬಾರಿಗೆ ವೈಭವಪೂರ್ಣ ಮೆರವಣಿಗೆ ಇಲ್ಲದೆ ನವದುರ್ಗೆಯರ ವಿಸರ್ಜನೆ ಕುದ್ರೋಳಿ ದೇಗುಲದ ಪುಷ್ಕರಣಿಯಲ್ಲಿ ನಡೆಯಿತು.

ಶಾರದಾ ಮಾತೆ ಸೇರಿದಂತೆ ನವದುರ್ಗೆಯರು ಹಾಗೂ ಗಣಪತಿಯ ಅಲಂಕೃತ ಮೂರ್ತಿಯನ್ನು ದೇಗುಲದ ಹೊರಾಂಗಣದಲ್ಲಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ಪ್ರದಕ್ಷಿಣೆ ಹಾಕಿ ಪುಷ್ಕರಣಿಯಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು.

ಕೊರೋನಾ ಮಾರ್ಗಸೂಚಿ ಹಿನ್ನಲೆಯಲ್ಲಿ ದಸರ ಉತ್ಸವವನ್ನು ಈ ಬಾರಿ ಅತ್ಯಂತ ಸರಳವಾಗಿ ನಡೆಸಿದ್ದು, ಈ ಹಿಂದಿನ ವರ್ಷಗಳಂತೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರ ಭವ್ಯ ಶೋಭಾಯಾತ್ರೆಯನ್ನು ರದ್ದುಗೊಳಿಸಲಾಗಿತ್ತು

ಈ ಹಿಂದೆ ರಾತ್ರಿ ಪೂರ್ತಿ ಅದ್ದೂರಿ ಟ್ಯಾಬ್ಲೋ ಮೂಲಕ ನಗರ ಪ್ರದಕ್ಷಿಣೆ ಮಾಡಿ ಮುಂಜಾನೆ ವೇಳೆಗೆ ದೇವಳದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಮೆರವಣಿಗೆಯನ್ನು ರದ್ದುಗೊಳಿಸಲಾಗಿತ್ತು. ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನೆರವೇರಿಸಿ ಹೊರಾಂಗಣದಲ್ಲೇ ಪ್ರದಕ್ಷಿಣೆ ಹಾಕಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.


Spread the love