ಮಂಗಳೂರು ನಗರದಲ್ಲಿ ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಒಳಗೊಂಡಂತಹ ಆರೋಪಿಗಳ ಬಂಧನ

Spread the love

ಮಂಗಳೂರು ನಗರದಲ್ಲಿ ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಒಳಗೊಂಡಂತಹ ಆರೋಪಿಗಳ ಬಂಧನ

ಮಂಗಳೂರು: 2020 ರ ನವೆಂಬರ್ ತಿಂಗಳಿಂದ ಮತ್ತು 2021 ರ ಇಲ್ಲಿಯ ವರೆಗೆ ಕುಳಾಯಿ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ, ಚಿಲಿಂಬಿ, ನಾಗುರಿ, ಕಪಿತಾನಿಯೋ ಎಂಬಲ್ಲಿರುವ ಕೆನರಾ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ , ಮಂಗಳಾದೇವಿಯ ಎಸ್.ಬಿ.ಐ . ಎಟಿಎಂ ಗಳಲ್ಲಿ ಸ್ವಿಮ್ಮಿಂಗ್ ಡಿವೈಸ್ ಅಳವಡಿಸಿ ಎಟಿಎಂ ಗ್ರಾಹಕರ ಡಾಟಾವನ್ನು ಪಡೆದುಕೊಂಡು ನಕಲಿ ಎಟಿಎಂ ಕಾರ್ಡ್ಗಳನ್ನು ತಯಾರಿಸಿ ದೆಹಲಿ, ಬೆಂಗಳೂರು, ಮೈಸೂರು, ಕಾಸರಗೋಡು, ಮಡಿಕೇರಿ, ಗೋವಾ, ಮುಂತಾದ ಕಡೆಗಳಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ಹಣವನ್ನು ವಿಡ್ರಾ ಮಾಡಿಕೊಂಡು ಮೋಸ ಮಾಡುತ್ತಿದ್ದ ಬಗ್ಗೆ ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ 22 ಸಿಮ್ಮಿಂಗ್ ಪ್ರಕರಣಗಳು ದಾಖಲಾಗಿದ್ದು ಈ ಸಂಬಂಧ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

  ಬಂಧಿತ ಆರೋಪಿಗಳನ್ನು ತ್ರಿಶೂರ್ ನಿವಾಸಿ ಗ್ಲಾಡಿವಿನ್ ಜಿಂಟೋ ಜೋಯ್ @ ಜಿಂಟು(37), ದೆಹಲಿ ನಿವಾಸಿ ದಿನೇಶ್ ಸಿಂಗ್ ರಾವತ್ (44), ಕೇರಳ ಕಾಸರಗೋಡು ನಿವಾಸಿ ಅಬ್ದುಲ್ ಮಜೀದ್ (27) ಮತ್ತು ಕೇರಳ ನಿವಾಸಿ ರಾಹುಲ್ ಟಿ ಎಸ್ (24) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ  ಪೊಲೀಸು ಉಪ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ರವರ ಮತ್ತು ಮಂಗಳೂರು ನಗರ ಮಾನ್ಯ ಪೊಲೀಸು ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂಧಿಗಳು ಕಾರಚರಣೆಯನ್ನು ಮಾಡಿರುತ್ತಾರೆ.

ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕಿಮ್ಮಿಂಗ್ ಡಿವೈಸ್, ಕೃತ್ಯಕ್ಕೆ ಬಳಸಿದ ಕಾರುಗಳು-2 ನಕಲಿ ಎಟಿಎಂ ಕಾರ್ಡ್ಗಳು, 5 ಮೊಬೈಲ್, ಆಫಲ್ ವಾಚ್ -2, ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ.25,00,000/- ಆಗಿರುತ್ತದೆ.


Spread the love