ಮಂಗಳೂರು: ನಗರದ ವನಿತಾ ಪಾರ್ಕ್ ನಲ್ಲಿ ಯೋಗ ಶಿಬಿರಕ್ಕೆ ಚಾಲನೆ

Spread the love

ಮಂಗಳೂರು: ನಗರದ ವನಿತಾ ಪಾರ್ಕ್ ನಲ್ಲಿ ಯೋಗ ಶಿಬಿರಕ್ಕೆ ಚಾಲನೆ

ಮಂಗಳೂರು: ದ.ಕ ಜಿಲ್ಲಾ ರೆಡ್ ಕ್ರಾಸ್ ಘಟಕ ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘ,ದೇವಿಕಾ ಯೋಗ ಕ್ಲಾಸ್ ಮತ್ತು ಮಂಗಳೂರು ನಾರ್ತ್ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ನಗರದ ಲಾಲ್ ಭಾಗ್ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್ ನಲ್ಲಿಂದು ಹಮ್ಮಿಕೊಂಡಿದ್ದ ಯೋಗ ಶಿಬಿರವನ್ನು ಮನಪಾ ಸದಸ್ಯೆ ಸಂಧ್ಯಾ ಆಚಾರ್ ಉದ್ಘಾಟಿಸಿ ಶುಭ ಹಾರೈಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ಅವರು ಮಾತನಾ ಡುತ್ತಾ,ವನಿತಾ ಪಾರ್ಕ್ ಯೋಗ ಶಿಬಿರ ನಡೆಸಲು ಸೂಕ್ತ ವಾದ ಪರಿಸರವನ್ನು ಹೊಂದಿದೆ.ನಮಗೆ ಶುದ್ಧ ವಾದ ಗಾಳಿ ಅಗತ್ಯ ವಿರುವ ಆಮ್ಲಜನಕ ಗಿಡ ಮರಗ ಳಿಂದ ದೊರೆಯುತ್ತದೆ.ನಗರದಲ್ಲಿ ಖಾಲಿ ಜಾಗ ಇರುವ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ಪತ್ರ ಕರ್ತರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವು ದಾಗಿ ತಿಳಿಸಿದರು.

ದ.ಕ ಜಿಲ್ಲಾ ರೆಡ್ ಕ್ರಾಸ್ ಘಟಕದ ಸಭಾಪತಿ ಶಾಂತರಾಮ ಶೆಟ್ಟಿ ಯವರು ಮಾತನಾ ಡುತ್ತಾ,ನಮ್ಮ ಬದುಕಿನಲ್ಲಿ ಲೌಕಿಕ ಸಂಪ ತ್ತನ್ನು ನಾವು ಸಂಗ್ರಹಿಸಿ ಇಡುವ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ.ಆದರೆ ಈ ಸಂಪತ್ತು ನಷ್ಟವಾದರು ಹೆಚ್ಚು ಚಿಂತೆ ಮಾಡ ಬೇಕಾಗಿಲ್ಲ.ಅದನ್ನು ಮತ್ತೆ ಗಳಿಸಬಹುದು. ಆದರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಂತ ದೊಡ್ಡ ಸಂಪತ್ತು. ಅದನ್ನು ಕಳೆದು ಕೊಳ್ಳದಂತೆ ಸಂರಕ್ಷಿಸಲು ಯೋಗ ಅಭ್ಯಾಸ ಉತ್ತಮ ಚಟುವಟಿಕೆ ಎಂದರು.

ದೇವಿಕಾ ಯೋಗ ಕ್ಲಾಸ್ ನ ಸಂಚಾಲಕರಾ ದ ದೇವಿಕಾ ಪುರುಷೋತ್ತಮ ರವರು ಶಿಬಿರ ದ ಬಗ್ಗೆ ಮಾಹಿತಿ ನೀಡುತ್ತಾ,ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ಕಾಗಿ ಯೋಗ ಚಟುವಟಿಕೆ ಅತ್ಯಂತ ಉಪಯುಕ್ತ ವಾಗಿದೆ. ಮಹಿಳೆ ಯರಿಗಾಗಿ ಯೋಗ ತರಬೇತಿ ಶಿಬಿರ ನ.2ರಿಂದ ಪ್ರತಿದಿನ ಬೆ10ರಿಂದ ಮಧ್ಯಾಹ್ನ 12ಗಂಟೆಯವರೆಗೆ ಡಿ.24ತನಕ ನಡೆಯಲಿದೆ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್ ನಲ್ಲಿ ನಡೆಯಲಿದೆ ಎಂದು ತಿಳಿಸಿದರು.ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರೋಟರಿ ಕ್ಲಬ್ ಇನ್ನರ್ ವೀಲ್ ಮಂಗಳೂರು ನಾರ್ತ್ ಇದರ ಅಧ್ಯಕ್ಷ ರಾದ ವಸಂತಿ ನಾಯಕ್, ಸದಸ್ಯೆ ಮಾಳವಿಕ,ರೆಡ್ ಕ್ರಾಸ್ ಘಟಕದ ಹಿರಿಯ ಸದಸ್ಯ ರಾದ ರವೀಂದ್ರನಾಥ ಉಚ್ಚಿಲ್,ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕ ರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿ ದರು.ದೇವಿಕಾ ಯೋಗ ತರಭೇತಿ ಸಂಸ್ಥೆಯ ಪ್ರತಿನಿಧಿ ನಯನ ಹೆಗ್ಡೆ ವಂದಿಸಿದರು.


Spread the love