ಮಂಗಳೂರು: ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲು ಕೋರಿಕೆ

Spread the love

ಮಂಗಳೂರು: ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲು ಕೋರಿಕೆ

ಮಂಗಳೂರು: ವ್ಯಕ್ತಿಯೋರ್ವ ನಾಪತ್ತೆಯಾಗಿದ್ದು ಆತನ ಪತ್ತೆಗೆ ಕೊಣಾಜೆ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ದೇರಳಕಟ್ಟೆಯಲ್ಲಿರುವ ಶ್ರೀದೇವಿ ಎಂಬ ಹೋಟೆಲ್ ನಲ್ಲಿ 8 ತಿಂಗಳಿನಿಂದ ಉತ್ತರಾಖಂಡ ಮೂಲದ ದೇವೆಂದ್ರ ರಾಮ್ (33) ಎಂಬಾತ ಕೆಲಸ ಮಾಡಿಕೊಂಡಿದ್ದು ಹೋಟೆಲ್ ಮೇಲಿರುವ ರೂಮ್ ನಲ್ಲಿ ವಾಸ ಮಾಡಿಕೊಂಡಿದ್ದು ಆಗಾಗ ಕೆಲವು ದಿನ ದುಡಿದ ಹಣಪಡೆದು ಹೊರಗಡೆ ಹೋಗುತ್ತಿದ್ದು ಬಳಿಕ ಕೆಲಸಕ್ಕೆ ಬರುತ್ತಿದ್ದನು. ಆತನಿಗೆ ದಿನನಿತ್ಯ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ಜೊತೆಗೆ ಮೂರ್ಛೆ ರೋಗವು ಇರುತ್ತದೆ. ದೈನಂದಿನ ಕೆಲಸ ಮುಗಿದು ಬಳಿಕ ಕೂಲಿ ಹಣವನ್ನು ಪಡೆದುಕೊಳ್ಳೂ4ತ್ತಿದ್ದು ಜುಲೈ 7 ರಂದು ಹೋಟೆಲ್ ನಲ್ಲಿ ಮಧ್ಯಾಹ್ನ 12ಗಂಟೆಗೆ ಕೆಲಸ ಮುಗಿಸಿ ಕೂಲಿ ಹಣ ಪಡೆದುಕೊಂಡು ಹೋದವನು ಈ ವರೆಗೆ ವಾಪಾಸ್ ಬಂದಿಲ್ಲಈತನ ಬಗ್ಗೆ ಮಾಹಿತಿ ಇದ್ದಲ್ಲಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಕೋರಲಾಗಿದೆ

ಈತನ ಎತ್ತರ ಸುಮಾರು 5.4 ಅಡಿ ಇದ್ದು ಗೋದಿ ಮೈಬಣ್ಣ, ಕೋಲು ಮುಖ ಹೊಂದಿರುತ್ತಾನೆ. ಸಾಧಾರಣ ಮೈಕಟ್ಟು ಸಪೂರ ಶರೀರ ಇದ್ದು ಹಿಂದಿ ಕನ್ನಡ ತುಳು ಭಾಷೆ ಮಾತನಾಡುತ್ತನೆ.

ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಆಯುಕ್ತರ ಕಚೇರಿ ನಿಯಂತ್ರಣ ಕೊಠಡಿ 0824-2220800 ಅಥವಾ ಕೊಣಾಜೆ ಠಾಣೆಯ 0824-2220536, 9480802350 ಸಂಖ್ಯೆ ಸಂಪರ್ಕಿಸಲು ಕೋರಲಾಗಿದೆ


Spread the love