
Spread the love
ಮಂಗಳೂರು : ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಮೃತ್ಯು
ಮಂಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷ 8 ತಿಂಗಳ ಮಗುವೊಂದು ಮೃತಪಟ್ಟ ದಾರುಣ ಘಟನೆ ಕಾವೂರಿನಲ್ಲಿ ನಡೆದಿರುವುದು ವರದಿಯಾಗಿದೆ.
ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಝ್ ಅನ್ಸಾರಿ ಎಂಬವರ ಪುತ್ರಿ ಆಯಿಶ ಮೃತ ಮಗು.
ಕೂಲಿ ಕಾರ್ಮಿಕರಾಗಿರುವ ಜಾರ್ಖಂಡ್ ರಾಜ್ಯದ ಮೂಲದವರಾದ ಫಿರೋಝ್ ಅನ್ಸಾರಿ ದಂಪತಿ ಕಾವೂರು ಮಸೀದಿಯ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬುಧವಾರ ಸಂಜೆ ಮಗು ಆಯಿಶ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love