Home Mangalorean News Kannada News ಮಂಗಳೂರು: ಪವಿತ್ರ ತುಳು ಸಿನಿಮಾ ಬಿಡುಗಡೆ

ಮಂಗಳೂರು: ಪವಿತ್ರ ತುಳು ಸಿನಿಮಾ ಬಿಡುಗಡೆ

Spread the love

ಮಂಗಳೂರು: ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್‍ಲೈನ್‍ನ ತುಳು ಚಲನ ಚಿತ್ರವು ಮಂಗಳೂರಿನ ಸುಚಿತ್ರ ಟಾಕೀಸ್‍ನಲ್ಲಿ ಬಿಡುಗಡೆ ಗೊಂಡಿತು.

ಚಂಡಿಕೋರಿ ಚಲನ ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್ ಮತ್ತು ಚಾಲಿಪೋಲಿಲು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತುಳು ಸಿನಿಮಾರಂಗಕ್ಕೆ ಈಗ ಪರ್ವಕಾಲ. ಬಹಳಷ್ಟು ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ, ಸಮಾಜಕ್ಕೆ ಸಂದೇಶ ನೀಡುವ ಮತ್ತು ಸದಭಿರುಚಿಯ ಸಿನಿಮಾಗಳನ್ನು ಪ್ರೇಕ್ಷಕರು ಖಂಡಿತಾ ಸ್ವೀಕರಿಸುತ್ತಾರೆ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು. ಇವತ್ತು ತುಳು ಚಿತ್ರರಂಗ ಉದ್ಯಮವಾಗಿ ಬೆಳೆಯುತ್ತಿದೆ. ಉತ್ತಮ ಚಿತ್ರಗಳ ಜತೆಗೆ ಅನೇಕ ಯುವ ಪ್ರತಿಭಾವಂತ ಕಲಾವಿದರು ಕೂಡಾ ತುಳು ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ ಎಂದು ಪ್ರಾಕಾಶ್ ಪಾಂಡೇಶ್ವರ್ ತಿಳಿಸಿದರು.

1-20160205-pavethra-movie-release

ಪವಿತ್ರ ತುಳು ಚಲನ ಚಿತ್ರದ ನಿರ್ಮಾಪಕ ಅನಂತರಾಮ ರಾವ್ ಎರ್ಮಾಳ್ ಮಾತನಾಡಿ ತಾನು ತುಳು ಭಾಷೆಯ ಮೇಲಿನ ಅಭಿಮಾನ, ಪ್ರೀತಿಯಿಂದ 83ರ ಹರೆಯದಲ್ಲಿ ತುಳು ಸಿನಿಮಾ ಮಾಡಿದ್ದೇನೆ. ಸಿನಿಮಾವನ್ನು ಪ್ರೇಕ್ಷಕರು ಸ್ವೀಕರಿಸುತ್ತಾರೆ ಎನ್ನುವ ಭರವಸೆ ನನಗಿದೆ. ಇಲ್ಲಿ ತುಳು ಭಾಷಾ ಚಿತ್ರಗಳ ನಿರ್ಮಾಪಕರ ಸಂಘ ರಚನೆಯಾಗಲಿ ಎಂದರು.

ಸಮಾರಂಭದಲ್ಲಿ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ನಿರ್ಮಾಪಕರಾದ ಗಂಗಾಧರ ಶೆಟ್ಟಿ, ಕಿಶೋರ್ ಕೊಟ್ಟಾರಿ, ಆರ್. ಧನ್‍ರಾಜ್, ಶರತ್ ಕದ್ರಿ, ಪಮ್ಮಿ ಕೊಡಿಯಾಲ್ ಬೈಲ್, ವಾಮನ್ ಶೆಟ್ಟಿ, ರೂಪೇಶ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಚಿತ್ರದ ನಾಯಕಿ ಚಿರಶ್ರೀ ಅಂಚನ್, ರಂಜನ್ ಬೋಳೂರ್, ರಂಜಿತ್ ಸುವರ್ಣ ಉಪಸ್ಥಿತರಿದ್ದರು.

ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದ್ದರು. ಪವಿತ್ರ ಸಿನಿಮಾ ಮಂಗಳೂರಿನಲ್ಲಿ ಸುಚಿತ್ರ, ಬಿಗ್‍ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್, ಬಿ.ಸಿ.ರೋಡ್‍ನಲ್ಲಿ ನಕ್ಷತ್ರ, ಮೂಡಬಿದ್ರೆಯಲ್ಲಿ ಅಮರಶ್ರೀ,  ಪುತ್ತೂರಿನಲ್ಲಿ ಅರುಣಾ ಚಿತ್ರ್ರ ಮಂದಿರದಲ್ಲಿ ತೆರೆ ಕಂಡಿದೆ.

ಕರಾವಳಿಯಲ್ಲಿ ಬೀಡಿ ಉದ್ಯಮ ಬಹು ದೂಡ್ಡ ಉದ್ಯಮವಾಗಿ ಬೆಳೆದಿದ್ದು ಇದರ ಹಿಂದಿನ ನಿಜವಾದ ಆಶಯ ಹಾಗು ಪ್ರಸಕ್ತ ಬದಲಾದ ಸನ್ನಿವೇಶವನ್ನು ಚಿತ್ರದಲ್ಲಿ ವಿಭಿನ್ನವಾಗಿ ಸೃಷ್ಠಿಸಲಾಗಿದೆ. ಜೆ.ಜಿ.ಕೃಷ್ಣ  ಛಾಯಾಗ್ರಹಣ, ರಿಸೆಲ್ ಸಾಹಿ  ಸಂಗೀತ, ಅಶೋಕ್‍ರಾಜ್ ನೃತ್ಯ ಈ ಸಿನಿಮಾಕ್ಕೆ ಇದೆ. ಸಿದ್ದರಾಜ್ ಸಾಹಸ ನಿರ್ದೇಶನದಲ್ಲಿ ಎರಡು ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.ಪವಿತ್ರ ಸಿನಿಮಾದಲ್ಲಿ  ಕುಸೇಲ್ದರಸೆ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಅಭಿನಯಿಸಿದ್ದಾರೆ. ಇನ್ನುಳಿದಂತೆ ಶ್ರವಂತ್, ಚಿರಶ್ರೀ  ಉಮೇಶ್ ಮಿಜಾರ್, ರಂಜನ್ ಬೋಳೂರು, ರಘು ಪಾಂಡೇಶ್ವರ್, ಮನೋಜ್ ಪುತ್ತೂರು, ಶೋಭಾ ರೈ, ವಿದ್ಯಾ, ಸುಪ್ರೀತ, ದೀಪಿಕಾ, ರಂಜಿತಾ ಶೇಟ್, ರಿತೇಶ್ ಮಂಗಳೂರು, ವಸಂತ್, ತಿಮ್ಮಪ್ಪ ಕುಲಾಲ್ ಮೊದಲಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕತೆಯನ್ನು ನಿರ್ಮಾಪಕ ಅನಂತರಾಮ್ ರಾವ್ ಎರ್ಮಾಳ್ ಒದಗಿಸಿದ್ದಾರೆ. ಚಿತ್ರಕತೆ, ನಿರ್ದೇಶನ: ನಾಗವೆಂಕಟೇಶ್, ಸಾಹಿತ್ಯ ಸಂಭಾಷಣೆ: ರಂಜಿತ್ ಸುವರ್ಣ,


Spread the love

Exit mobile version