ಮಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿಗಳಿಗೆ ಗುಂಡೇಟು

Spread the love

ಮಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿಗಳಿಗೆ ಗುಂಡೇಟು

ಮಂಗಳೂರು: ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಕಳೆದ ಸೋಮವಾರ ರಾತ್ರಿ ಬೈಕಂಪಾಡಿ ಸಮೀಪದ ಮೀನಕಳಿ ಬಳಿ ನಡೆದ ರೌಡಿ ಶೀಟರ್‌ ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳಾದ ಅರ್ಜುನ್‌ ಮೂಡುಶೆಡ್ಡೆ ಮತ್ತು ಮನೋಜ್‌ ಯಾನೆ ಬಿಂದಾಸ್‌ ಮನೋಜ್‌ರನ್ನು ಬಂಧಿಸಿದ್ದರು.

ಶನಿವಾರ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಕೊಂಡೊಯ್ಯುವ ವೇಳೆ ಈ ಇಬ್ಬರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಸಿಸಿಬಿ ಇನ್ಸ್‌ ಪೆಕ್ಟರ್‌ ಮಹೇಶ್‌ ಪ್ರಸಾದ್‌ ಅವರು ಮೂರು ಸುತ್ತು ಫೈರಿಂಗ್‌ ಮಾಡಿದ್ದು ಆರೋಪಿಗಳ ಕಾಳಿಗೆ ಗುಂಡೇಟು ಬಿದ್ದಿದೆ.

ಘಟನೆಯಲ್ಲಿ ಪಿ ಎಸ್‌ ಐ ನಾಗೇಂದ್ರ, ಎ ಎಸ್‌ ಐ ಡೇವಿಡ್‌, ಎ ಎಚ್‌ ಸಿ ಸಂತೋಷ್‌ ಪೂಜಾರಿ ಗಾಯಗೊಂಡಿದ್ದು ಆರೋಪಿಗಳು ಹಾಗೂ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love