ಮಂಗಳೂರು: ಬಸ್‌ ಚಕ್ರ ಹರಿದು ಬಾಲಕನ ದುರಂತ ಅಂತ್ಯ

Spread the love

ಮಂಗಳೂರು: ಬಸ್‌ ಚಕ್ರ ಹರಿದು ಬಾಲಕನ ಮೃತ
 

ಮಂಗಳೂರು: ಬಸ್‌ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ಬಾಲಕ ಕೆಳ ಬಿದ್ದು ಬಸ್‌ ಚಕ್ರ ಹರಿದು ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ಸಿಗ್ನಲ್ ಬಳಿ ಸೋಮವಾರ ಮಧ್ಯಾಹ್ನ ( ಅ.17 ರಂದು) ಸಂಭವಿಸಿದೆ.

ನೀರುಮಾರ್ಗದ ಧನು(13) ಮೃತಪಟ್ಟ ಬಾಲಕ.

ಈತ ತನ್ನ ಸಂಬಂಧಿ ಜತೆ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಹೋಗುತ್ತಿದ್ದಾಗ ಖಾಸಗಿ ಸರ್ವಿಸ್ ಬಸ್ ಢಿಕ್ಕಿ ಹೊಡೆಯಿತು. ಪರಿಣಾಮ ಸವಾರ ಸ್ಕೂಟರ್ ನಿಂದ ಎಡ ಬದಿಗೆ ಬಿದ್ದರು. ಧನು ಬಲ ಬದಿಗೆ ಬಿದ್ದರು. ಅವರ ಮೇಲೆ ಬಸ್ ನ ಚಕ್ರ ಹಾದು ಹೋಗಿ ಮೃತಪಟ್ಟರು. ಬಸ್ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ತಿಳಿದು ಬಂದಿದೆ.


Spread the love