ಮಂಗಳೂರು: ಬಿಜೆಪಿ ಪಕ್ಷದ ಹಲವು ಮಂದಿ ಕಾಂಗ್ರೆಸ್ ಗೆ ಸೇರ್ಪಡೆ

Spread the love

ಮಂಗಳೂರು: ಬಿಜೆಪಿ ಪಕ್ಷದ ಹಲವು ಮಂದಿ ಕಾಂಗ್ರೆಸ್ ಗೆ ಸೇರ್ಪಡೆ

ಮಂಗಳೂರು: ಬಿಜೆಪಿ ಪಕ್ಷದ ಪದಾಧಿಕಾರಿ, ಹಾಗೂ ಸಾಮಾಜಿಕ ಕಾರ್ಯಕರ್ತರಾದ ಹನೀಫ್ ಸಾಹೇಬ್ ಪಾಜೆಪಲ್ಲ ಹಾಗೂ ಎಂಟು ಮಂದಿ ಕಾರ್ಯಕರ್ತರು ಮತ್ತು ಎಸ್ಡಿಪಿಐ ಪಕ್ಷದ ಶ್ರೀಮತಿ ಸಾಯಿರಾ ಬಾನು ಅವರು ತಾ 30.4.2023ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಂಕನಾಡಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರ ಸಮ್ಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಮಾಜಿ ಮೇಯರ್ ಹಾಗೂ ಫಲ್ನೀರ್ ವಾರ್ಡಿನ ಕಾರ್ಪೊರೇಟರ್ ಜಸಿಂತಾ ವಿಜಯ ಅಲ್ಫ್ರೆಡ್,ಕುದ್ರೋಳಿ ವಾರ್ಡಿನ ಕಾರ್ಪೊರೇಟರ್ ಸಂಶುದ್ದಿನ್,ಟಿ. ಕೆ. ಸುಧೀರ್, ಮೆರಿಲ್ ರೇಗೋ, ವಾಹಾಬ್ ಕುದ್ರೋಳಿ,ಸುನಿಲ್ ಕುಮಾರ್,ರಮಾನಂದ ಬೋಳಾರ್, ಸವಾನ್ ಜೆಪ್ಪು,ಲಿಯಾಕತ್ ಶಾಹ್, ಅಯೂಬ್ ಶಾಹ್, ಮೊಹಮ್ಮದ್ ಕೈಫ್, ಅಬ್ದುಲ್ ಹಮೀದ್, ಬಿಲ್ಡಿಂಗ್ ಸಮಿತಿ ಅಧ್ಯಕ್ಷ ಅಶ್ರಫ್ ಅಬ್ದುಲ್ ರೆಹೇಮನ್ ಮೊದಲಾದವರು ಉಪಸ್ಥಿತರಿದ್ದರು.

Spread the love