ಮಂಗಳೂರು: ಬೆಂದೂರ್ ವೆಲ್ ಬಳಿ ರಸ್ತೆ ದಾಟುತ್ತಿದ್ದಾಗ ಮಹಿಳೆಯ ಮೇಲೆ ಬಸ್ಸು ಹರಿದು ಸಾವು

Spread the love

ಮಂಗಳೂರು: ರಸ್ತೆ ದಾಟುತ್ತಿದ್ದಾಗ ಮಹಿಳೆಯ ಮೇಲೆ ಬಸ್ಸು ಹರಿದು ಸಾವು

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರ ಮೇಲೆ ಹರಿದು ಸಾವನಪ್ಪಿದ ಘಟನೆ ನಗರದ ಬೆಂದೂರ್ ವೆಲ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ಮಹಿಳೆಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಂಕನಾಡಿ ಕಡೆಗೆ ಚಲಿಸುತ್ತಿದ್ದ ಸಿಟಿ ಬಸ್ ಬೆಂದೂರ್ವೆಲ್ನಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಮಹಿಳೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸ್ಥಳೀಯರ ಪ್ರಕಾರ ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದ್ದು,. ಬೆಂದೂರುವೆಲ್ ಜಂಕ್ಷನ್ನಲ್ಲಿ ಒಂದು ವಾರದೊಳಗೆ ಇದು ಎರಡನೇ ಸಾವಾಗಿದೆ ಮಾರ್ಚ್ 24 ರಂದು ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ನಂತರ 11 ವರ್ಷದ ಬಾಲಕನ ಮೇಲೆ ಬಸ್ಸು ಹರಿದಿತ್ತು.

ಮೃತ ಮಹಿಳೆ ಶವವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.

ಅಪರಾಧ ಮತ್ತು ಟ್ರಾಫಿಕ್ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ಗೀತಾ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.


Spread the love

1 Comment

  1. Bus Owners and Drivers Association will get over it.

    Traffic Police are not concerned of the rash driving by the Bus and Auto drivers, but are finding means of levying penalty on private vehicles (cars and bykes) since the private vehicles don’t have a Union that could take care of monthly instalments to ????

Comments are closed.