ಮಂಗಳೂರು: ಬ್ಯಾಂಕ್ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆ

Spread the love

ಮಂಗಳೂರು: ಬ್ಯಾಂಕ್ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಂಗಳೂರು: ಬ್ಯಾಂಕ್ ಮ್ಯಾನೇಜರ್ ಓರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶರ್ಬತ್ ಕಟ್ಟೆ ಎಂಬಲ್ಲಿ ಗುರುವಾರ ಸಂಭವಿಸಿದೆ.

ಮೃತರನ್ನು ಶರ್ಬತ್ ಕಟ್ಟೆ ನಿವಾಸಿ ಪದ್ಮಾವತಿ (52) ಎಂದು ಗುರುತಿಸಲಾಗಿದೆ. ಮೃತ ಪದ್ಮಾವತಿಯವರು ನಗರದ ಬಿಜೈ ಸಮೀಪದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಾಹಿತಿಗಳ ಪ್ರಕಾರ ಪದ್ಮಾವತಿಯವರು ಶಕ್ತಿನಗರದ ಬಳಿಸಿ ವಾಸಮಾಡಿಕೊಂಡಿದ್ದು ಇತ್ತೀಚೆಗೆ ಶರ್ಬತ್ ಕಟ್ಟೆ ಬಳಿಯ ಅಪಾರ್ಟ್ ಮೆಂಟ್ ಗೆ ಬಂದಿದ್ದು, ಇದೇ ಸೋಮವಾರ ಮನೆಯ ಗೃಹ ಪ್ರವೇಶ ಕೂಡ ನಡೆದಿತ್ತು. ಗುರುವಾರ ಸಂಜೆ ಅವರು ತಾವಿದ್ದ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಕೆಲಸದ ಒತ್ತಡದಿಂದಾಗಿ ಪದ್ಮಾವತಿಯವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love