ಮಂಗಳೂರು: ಭೂಮಿಕಾ ಟೆಕ್ಸ್‌ ಟೈಲ್‌ ನ ಮ್ಹಾಲಕಿ ನೇಣು ಬಿಗಿದು ಆತ್ಮಹತ್ಯೆ

Spread the love

ಮಂಗಳೂರು: ಭೂಮಿಕಾ ಟೆಕ್ಸ್‌ ಟೈಲ್‌ ನ ಮ್ಹಾಲಕಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ನಗರದಲ್ಲಿನ ಖ್ಯಾತ ಬಟ್ಟೆ ಮಳಿಗೆಯಾದ ಭೂಮಿಕಾ ಟೆಕ್ಸ್‌ ಟೈಲ್‌ ನ ಮ್ಹಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ನಗರದ ಖ್ಯಾತ ಬಟ್ಟೆ ಉದ್ಯಮಿ ಪಿ ಕೆ ದೂಜ ಪೂಜಾರಿಯವರ ಸೊಸೆ ಭೂಮಿಕಾ ಟೆಕ್ಸ್‌ ಟೈಲ್‌ ಮ್ಹಾಲಕಿ ಸುಮಾ ಸತೀಶ್‌ ಎಂದು ಗುರುತಿಸಲಾಗಿದೆ.

ನಗರದ ಮಣ್ಣಗುಡ್ಡ ಅಭಿಮಾನ್‌ ಮೆನ್‌ ಷನ್‌ ಅಪಾರ್ಟ್‌ ಮೆಂಟ್‌ ನಲ್ಲಿ ವಾಸವಾಗಿದ್ದ ಇವರು ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯ ಬಾಲ್ಕನಿಯನ್ನು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love