
ಮಂಗಳೂರು: ಮಟ್ಕಾ ಜುಗಾರಿ ಆಡಿಸುತ್ತಿದ್ದ ಮೂವರ ಬಂಧನ
ಮಂಗಳೂರು: ನಗರದ ಜ್ಯೋತಿ ಜಂಕ್ಷನ್ ಹತ್ತಿರ ಸ್ಮಾರ್ಟ್ ಟವರ್ ನ ನೆಲ ಮಹಡಿಯಲ್ಲಿರುವ ಮೋನು ಎಂಟರ್ ಪ್ರೈಸಸ್ ಎದುರು ಮಟ್ಕಾ ಜುಗಾರಿ ಅದೃಷ್ಟದ ಆಟ ಆಡಿಸುತ್ತಿದ್ದ ಬಗ್ಗೆ ಭಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ದಾಳಿ ನಡೆಸಿ ರೂ 3,000ನಗದು -/ ಹಣ, ಮಟ್ಕಾ ಜುಗಾರಿ ನಡೆಸಲು ಉಪಯೋಗಿಸುತ್ತಿದ್ದ ಸ್ಯಾಮ್ ಸಂಗ್ ಮೊಬೈಲ್ ಫೋನ್ 2 ಕಂಪ್ಯೂಟರ್ -2 ಹಾಗೂ ಆಟಕ್ಕೆ ಬಳಸುತ್ತಿದ್ದ ಪರಿಕರಗಳು ಸೇರಿದಂತೆ ಒಟ್ಟು ರೂ75.000/- ಬೆಲೆ ಬಾಳುವ ಸೊತ್ತುಗಳು ಹಾಗೂ ಆರೋಪಿತರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ
ಬಂಧಿತ ಆರೋಪಿಗಳನ್ನು ಕೋಟೆಕಾರು ನಿವಾಸಿ ಪ್ರವೀಣ್ (33), ಕುಡುಪಿ ನಿವಾಸಿ ಮನೋಜ್ ಜಾರ್ಜ್ ನೊರೊನ್ಹಾ (43), ಗೋರಿಗುಡ್ಡೆ ನಿವಾಸಿ ರಾಕೇಶ್ (47) ಎಂದು ಗುರುತಿಸಲಾಗಿದೆ.
ಮಂಗಳೂರು ಈ ಕಾರ್ಯಚರಣೆಯನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಕುಲದೀಪ್ ಅ ಜೈನ್ ರವರ ಮಾರ್ಗದರ್ಶನದಂತೆ ಅಂಶುಕುಮಾರ್, ಉಪ ಪೊಲೀಸ್ ಆಯುಕ್ತರು, ಕಾನೂನು, ಸುವ್ಯವಸ್ಥೆ ಮತ್ತು ದಿನೇಶ್ ಕುಮಾರ್ ಬಿ.ಪಿ., ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಂಚಾರ ರವರ ನಿರ್ದೇಶನದಂತ ಹಾಗೂ ಮಹೇಶ್ ಕುಮಾರ್ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಕೇಂದ್ರ ವಿಭಾಗರವರ ನೇತೃತ್ವದಲ್ಲಿ, ಕೇಂದ್ರ ಉಪವಿಭಾಗದ- ಅಧಿಕಾರಿ ಮತ್ತು ಸಿಬ್ಬಂಧಿಯವರು ವತ್ತ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.