ಮಂಗಳೂರು: ಮದರಸ ಶಿಕ್ಷಕನಿಂದ ಬಾಲಕನಿಗೆ ಹಲ್ಲೆ

Spread the love

ಮಂಗಳೂರು: ಮದರಸ ಶಿಕ್ಷಕನಿಂದ ಬಾಲಕನಿಗೆ ಹಲ್ಲೆ

ಮಂಗಳೂರು: ಬಾಲಕನೋರ್ವನಿಗೆ ಮದರಸದ ಶಿಕ್ಷಕ ಹಲ್ಲೆ ನಡೆಸಿರುವ ಘಟನೆ ಹರೇಕಳ ಗ್ರಾಮದ ದೇರಿಕಟ್ಟೆ ಎಂಬಲ್ಲಿ ಶನಿವಾರ ಸಂಜೆ ವೇಳೆ ಸಂಭವಿಸಿದ್ದು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಕ ಉಸ್ತದ್ ಯಹ್ಯಾ ಫೈಝಿ

ಹಲ್ಲೆಗೊಳಗಾದ ಬಾಲಕನನ್ನು ಹರೇಕಳ ದೇರಿಕಟ್ಟೆ ಮಹಮ್ಮದ್ ಎಂಬವರ ಪುತ್ರ ಎಂದು ಗುರುತಿಸಲಾಗಿದೆ.

ಮದರಸಕ್ಕೆ ತೆರಳಿದ್ದ ಬಾಲಕನಿಗೆ ವಿಚಾರವೊಂದಕ್ಕೆ ಸಂಬಂಧಿಸಿ ಶಿಕ್ಷಕ ಉಸ್ತದ್ ಯಹ್ಯಾ ಫೈಝಿ ಎಂಬವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಹೆತ್ತವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love

Leave a Reply

Please enter your comment!
Please enter your name here