ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆ

Spread the love

ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆ

ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ದಿನಾಂಕ ಸೆಪ್ಟೆಂಬರ್ 23 ರಂದು ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಅಂಬೇಡ್ಕರ್ ಭವನ ಊರ್ವ ಸ್ಟೋರ್, ಮಂಗಳೂರು ನಲ್ಲಿ ಆಯೋಜಿಸಲಾಯಿತು.

 ಮಹಾಪೌರ  ಜಯಾನಂದ್ ಅಂಚನ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ನಿವೃತ್ತ ಪೌರಕಾರ್ಮಿಕರು ಹಾಗೂ ಉತ್ತಮ ಸಾಧನೆಗೈದ ಪೌರಕಾರ್ಮಿಕರ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಎಲ್ಲಾ ಪೌರಕಾರ್ಮಿಕ ಬಂಧುಗಳಿಗೆ ಬೆಳಗ್ಗಿನ ಹಾಗೂ ಮಧ್ಯಾಹ್ನದ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ  ಆಯುಕ್ತರು  ಅಕ್ಷಯ್ ಶ್ರೀಧರ್,IAS, ಮಾಜಿ ಮಹಾಪೌರರು   ಪ್ರೇಮಾನಂದ ಶೆಟ್ಟಿ, ಉಪಯುಕ್ತ ಆಡಳಿತ, ಸ್ಥಳೀಯ ಸದಸ್ಯರು ,  ಜಯಲಕ್ಷ್ಮಿ ಶೆಟ್ಟಿ ಅವರು ಪಾಲ್ಗೊಂಡಿದ್ದರು.

ಸಭೆಯನ್ನು ಉದ್ದೇಶಿಸಿ ಪೂಜ್ಯ ಮಹಾಪೌರರು ಮಾನ್ಯ ಆಯುಕ್ತರು ಮಾಜಿ ಮಹಾಪೌರರು ಹಾಗೂ ಪೌರ ಕಾರ್ಮಿಕ ಸಂಘದ ಅಧ್ಯಕ್ಷರು ಮಾತನಾಡಿದರು.

ವೇದಿಕೆಯಲ್ಲಿ ಮಾಜಿ ಉಪ ಮೇಯರ್  ಸುಮಂಗಳ ಹಾಗೂ ಸದಸ್ಯರು ಆದ ಕಿರಣ್ ಕುಮಾರ್, ಗಣೇಶ್, ಶೈಲೇಶ್ ಶೆಟ್ಟಿ,  ಭಾನುಮತಿ, ಮನೋಜ್ ಕುಮಾರ್,  ಸುಮಿತ್ರ,  ಹೇಮಲತಾ ರಘು ಸಾಲಿಯಾನ್, ಪೌರ ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here