ಮಂಗಳೂರು: ಮಾದಕ ವಸ್ತು ಮಿಶ್ರಿತ 100 ಕೆ.ಜಿ ಚಾಕೊಲೆಟ್‌ ವಶ

Spread the love

ಮಂಗಳೂರು: ಮಾದಕ ವಸ್ತು ಮಿಶ್ರಿತ 100 ಕೆ.ಜಿ ಚಾಕೊಲೆಟ್‌ ವಶ

ಮಂಗಳೂರು: ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಎರಡು ಕಡೆ ಮಾರಾಟ ಮಾಡಲಾಗುತ್ತಿದ್ದ ಸುಮಾರು100 ಕೆಜಿಯಷ್ಟು ಮಾದಕ ವಸ್ತು ಮಿಶ್ರಿತ ಚಾಕೊಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ರಥಬೀದಿಯಲ್ಲಿ ಮನೋಹರ್ ಶೇಟ್ ಮತ್ತು ನಗರದ ಫಳ್ನೀರ್ ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬಾತ ಮಾದಕ ವಸ್ತು ಮಿಶ್ರಿತ ಬಾಂಗ್ ಎಂಬ ಚಾಕೊಲೆಟ್ ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಟ್ಟು ಸುಮಾರು 100ಕೆಜಿ ಚಾಕೊಲೆಟ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಚಾಕೊಲೆಟ್ ನ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಲಯಕ್ಕೆ ಕಳುಹಿಸಿದ್ದು, ಅದರ ವರದಿ ಆಧಾರದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.


Spread the love