ಮಂಗಳೂರು| ಮಾದಕ ವಸ್ತು ಸೇವನೆ ಆರೋಪ: ಐದು ಮಂದಿ ಸೆರೆ
ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಪ್ರಕರಣ ಗಳಲ್ಲಿ ಮಾದಕ ವಸ್ತುವನ್ನು ಸೇವನೆ ಆರೋಪದಲ್ಲಿ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೊಂಡಂತಿಲ ಗ್ರಾಮದ ಬಿತ್ತುಪಾದೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವನೆ ಆರೋಪದಲ್ಲಿ ಅಡ್ಯಾರ್ ಪದವಿನ ರಕ್ಷಿತ್ (32 ) ಮತ್ತು ಮುಹಮ್ಮದ್ ಸಫ್ವಾನ್ (21 )ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ನೀರುಮಾರ್ಗ ಗ್ರಾಮದ ಮಾಣೂರಿನ ಕೊಳ್ಚಾರ್ ರೋಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವನೆ ಮಾಡಿದ ಆರೋಪದಲ್ಲಿ ಅಡ್ಯಾರ್‌ನ ಹಿತೇಶ್ (23 ) ಮತ್ತು ಕವೀಶ್ ( 29) ಇನ್ನೊಂದು ಪ್ರಕರಣದಲ್ಲಿ ನೀರುಮಾರ್ಗ ಜಂಕ್ಷನ್ ಬಳಿ ಅಡ್ಯಾರ್ ಪದವಿನ ಮುಹಮ್ಮದ್ ಇರ್ಷಾದ್ (23) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಆ.15ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಪಂಪ್‌ವೆಲ್ ಫ್ಲೈ ಓವರ್ ಬ್ರಿಡ್ಜ್ ಕೆಳಗೆ ನಿಷೇದಿತ ಮಾದಕ ವಸ್ತುಗಳನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ಹೃತಿಕ್( 21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.