ಮಂಗಳೂರು: ಮಾವಿನ ಹಣ್ಣು ಕೀಳಲು ಮರವೇರಿದ್ದ ವ್ಯಕ್ತಿ ಆಯತಪ್ಪಿ ಕೆಳಗೆ ಬಿದ್ದು ಮೃತ್ಯು

Spread the love

ಮಂಗಳೂರು: ಮಾವಿನ ಹಣ್ಣು ಕೀಳಲು ಮರವೇರಿದ್ದ ವ್ಯಕ್ತಿ ಆಯತಪ್ಪಿ ಕೆಳಗೆ ಬಿದ್ದು ಮೃತ್ಯು

ಮಂಗಳೂರು: ಮಾವಿನ ಹಣ್ಣು ಕೀಳಲು ಮರವೇರಿದ್ದ ವ್ಯಕ್ತಿಯೋರ್ವರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಉಳ್ಳಾಲದಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ಉಳ್ಳಾಲ ಮೊಗವೀರ ಪಟ್ಣ ನಿವಾಸಿ ನಿತಿನ್ ಸುವರ್ಣ (37) ಎಂದು ಗುರುತಿಸಲಾಗಿದೆ.

ನಿತಿನ್ ಅವರು ಶನಿವಾರ ಸಂಜೆ ಅಬ್ಬಕ್ಕ ವೃತ್ತದ ಬೀಚ್ ರಸ್ತೆ ಬದಿಯ ಮಾವಿನ ಮರದಲ್ಲಿನ ಹಣ್ಣು ಕೀಳಲು ಮರವೇರಿದ್ದು ಈ ವೇಳೆ ಆಯತಪ್ಪಿ ಬಿದ್ದು ತಲೆಗೆ ಕಲ್ಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಮೃತ ನಿತಿನ್ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು.


Spread the love