ಮಂಗಳೂರು : ರೈಲು ಹಳಿಗೆ ತಲೆಕೊಟ್ಟು  ನವ ವಿವಾಹಿತ ಆತ್ಮಹತ್ಯೆ 

Spread the love

ಮಂಗಳೂರು : ರೈಲು ಹಳಿಗೆ ತಲೆಕೊಟ್ಟು  ನವ ವಿವಾಹಿತ ಆತ್ಮಹತ್ಯೆ 

ಮಂಗಳೂರು: ನವ ವಿವಾಹಿತನೋರ್ವನು ಚಲಿಸುತ್ತಿದ್ದ ರೈಲಿನಡಿಗೆ ತಲೆ ಇಟ್ಟು ಆತ್ಮ ಹತ್ಯಗೈದ ಘಟನೆ ನಗರದ ಎಕ್ಕೂರು ಎಂಬಲ್ಲಿ ನಡೆದಿದೆ.

ಜಪ್ಪಿನ ಮೊಗರು ತಂದೋಳಿಗೆ ನಿವಾಸಿ ಧೀರಜ್ ಕುಲಾಲ್(32) ಆತ್ಮ ಹತ್ಯೆಗೈದ ದುರ್ದೈವಿ.

ಖಾಸಗಿ ಕಂಪನಿಯಲ್ಲಿ ಮಾರ್ಕೆಂಟಿಗ್ ಮ್ಯಾನೇಜರ್ ಆಗಿದ್ದ ಧೀರಜ್ ಕಳೆದ ಆರೇಳು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರಂತೆ.ಧೀರಜ್ ಇಂದು ಮದ್ಯಾಹ್ನದ ವೇಳೆ ಎಕ್ಕೂರು ರೈಲ್ವೇ ಮೇಲ್ಸೇತುವೆ ಕೆಳಗಡೆಯ ರೈಲ್ವೇ ಹಳಿಯಲ್ಲಿ ಆತ್ಮ ಹತ್ಯೆಗೈದಿದ್ದಾರೆ.

ಮೃತ ಧೀರಜ್ ಅವರ ತಾಯಿ ಗಿರಿಜ ಅವರು 1995 ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.ಧೀರಜ್ ಅವರ ಏಕೈಕ ತಮ್ಮ ಪುಷ್ಪರಾಜ್ ಕಳೆದ ಎರಡು ವರುಷಗಳ ಹಿಂದೆ ಪದವಿನಂಗಡಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು.ತಂದೆ ತಾಯಿಗೆ ಪುಷ್ಪರಾಜ್ ಮತ್ತು ಧೀರಜ್ ಇಬ್ಬರೆ ಮಕ್ಕಳು.ಧೀರಜ್ ಅವರ ತಂದೆ ಪತ್ನಿ ಸಾವಿನ ಬಳಿಕ‌ ಮಕ್ಕಳನ್ನ‌ ತೊರೆದು ಹೋಗಿದ್ದರಂತೆ.ಅನಾಥರಾಗಿದ್ದ ಧೀರಜ್ ಮತ್ತು ಪುಷ್ಪರಾಜ್ ದೊಡ್ಡಮ್ಮನ ಪಾಲನೆಯಲ್ಲೇ ಬೆಳೆದಿದ್ದರು.ಅಪಘಾತಗಳಲ್ಲೆ ತನ್ನವರನ್ನ ಕಳಕೊಂಡಿದ್ದ ಧೀರಜ್ ಕೂಡ ಇದೀಗ ಆತ್ಮ ಹತ್ಯೆಗೆ ಶರಣಾಗಿದ್ದು ಕುಟುಂಬ ಮತ್ತು ಸ್ನೇಹಿತರನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ.

ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


Spread the love