ಮಂಗಳೂರು: ಲಾಕ್ ಡೌನ್ ಉಲ್ಲಂಘಿಸಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ನಾಲ್ಕು ಮದುವೆ – ಎಸಿ ನೇತೃತ್ವದ ತಂಡ ದಾಳಿ

Spread the love

ಮಂಗಳೂರು: ಲಾಕ್ ಡೌನ್ ಉಲ್ಲಂಘಿಸಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ನಾಲ್ಕು ಮದುವೆ – ಎಸಿ ನೇತೃತ್ವದ ತಂಡ ದಾಳಿ

ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದ ಸಮೀಪದ ವೇದಿಕೆಯಲ್ಲಿ ಏಕಕಾಲದಲ್ಲಿ ನಾಲ್ಕು ಮದುವೆ ಕಾರ್ಯಕ್ರಮಗಳು ನಡೆಸುತ್ತಿದ್ದ ಸಂದರ್ಭ ಎಸಿ ಮದನ್ ಮೋಹನ್ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿ, ಕೇಸು ದಾಖಲಿಸಿದೆ.

ನಿಯಮಬಾಹಿರವಾಗಿ ಮದುವೆ ಸಮಾರಂಭ ಆಯೋಜಿಸಿರುವುದಾಗಿ ಬಂದ ದೂರಿನ ಹಿನ್ನೆಲೆ ಈ ದಾಳಿ ನಡೆದಿದೆ. ಮದುವೆಗೆ ನೂರಕ್ಕೂ ಹೆಚ್ಚು ಜನರ ಗುಂಪುಗೂಡಿದ್ದರು ಎಂದು ತಿಳಿದುಬಂದಿದೆ.

‘ಮಂಗಳಾದೇವಿ ದೇವಸ್ಥಾನದ ಸಮೀಪ ಕೋವಿಡ್ ನಿಯಮ ಉಲ್ಲಂಘಿಸಿ ದೇವಸ್ಥಾನ ಮಂಡಳಿಯು ಏಕಕಾಲದಲ್ಲಿ ನಾಲ್ಕು ಮದುವೆಗಳಿಗೆ ಅವಕಾಶ ನೀಡಿದೆ. ಮದುವೆ ನಡೆಯಲು ಅನುಮತಿ ನೀಡಿದವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಸಿ ಮದನ್ ಮೋಹನ್ ತಿಳಿಸಿದ್ದಾರೆ.


Spread the love