ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆ. ಪೃಥ್ವಿರಾಜ್ ರೈ

Spread the love

ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆ. ಪೃಥ್ವಿರಾಜ್ ರೈ

ಮಂಗಳೂರು:  ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಕೆ. ಪೃಥ್ವಿರಾಜ್ ರೈ ಆಯ್ಕೆಯಾಗಿದ್ದಾರೆ. 2022ರ ಜೂನ್ 10ರಂದು ನಡೆದ ಚುನಾವಣೆಯಲ್ಲಿ ಅವರು ತಮ್ಮ ಎದುರಾಳಿ ಅರುಣ್ ಬಂಗೇರ ಅವರನ್ನು ಸೋಲಿಸಿ ಜಯ ಗಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಹಿರಿಯ ವಕೀಲ ಹಾಗೂ ಜಿಲ್ಲಾ ಸರ್ಕಾರಿ ವಕೀಲರಾದ ಮನೋರಾಜ್ ರಾಜೀವ ಆಯ್ಕೆಯಾಗಿದ್ದಾರೆ. ಅವರು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಅವರನ್ನು ಸೋಲಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮೂರು ವಕೀಲರು ಸ್ಪರ್ಧಿಸಿದ್ದು, ಶ್ರೀಧರ ಎಣ್ಮಕಜೆ ಎಲ್ಲರನ್ನೂ ಮೀರಿಸಿ ಆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಖಜಾಂಚಿ ಸ್ಥಾನಕ್ಕೆ ಶಶಿರಾಜ್ ರಾವ್ ಕಾವೂರು ಚುನಾಯಿತರಾದರು. ಅವರು ತಮ್ಮ ಪ್ರತಿಸ್ಪರ್ಧಿ ಪ್ರವೀಣ್ ಅದ್ಯಪಾಡಿ ಮತ್ತು ಇತರ ಇಬ್ಬರನ್ನು ಸೋಲಿಸಿ ಈ ಸ್ಥಾನಕ್ಕೆ ಏರಿದರು.

ಮಹಿಳಾ ಮೀಸಲು ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಚೈತ್ರಾ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈ ಕೆಳಗಿನವರು ಆಯ್ಕೆಯಾದರು.

ಪ್ರಸಾದ್ ಪೂಜಾರಿ, ರೇಷ್ಮ ಡಿ ಸೋಜ, ಸುಹಾಸ್ ಶೆಟ್ಟಿ (3 to 10 ವಿಭಾಗದಲ್ಲಿ), ಶುಕರಾಜ್ ಕೊಟ್ಟಾರಿ, ಶೀತಲ್, ವಿಕ್ರಮ ಪಡ್ವೆಂತಾಯ (10 to 20 ವಿಭಾಗದಲ್ಲಿ), ದಿನಕರ ಶೆಟ್ಟಿ, ಈಶ್ವರ್ ಕೊಟ್ಟಾರಿ, ಶ್ರೀಕುಮಾರ್ (Above 20 ವಿಭಾಗದಲ್ಲಿ- ಅವಿರೋಧ), ವಾಸುದೇವ ಗೌಡ, ಬೇಬಿ ಅರಸ, ದೇವದಾಸ್ ರಾವ್ (Above 30), ಮಹಿಳಾ ವಿಭಾಗದಲ್ಲಿ ಸ್ವಾತಿ, ಜೀಟಾ ಪ್ರಿಯಾ ಮೋರಸ್(ಅವಿರೋಧ), ಸುಮನಾ ಶರಣ್ ಆಯ್ಕೆಯಾದರು.


Spread the love