ಮಂಗಳೂರು: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 

Spread the love

ಮಂಗಳೂರು: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 

ಮಂಗಳೂರು: ಜಿಲ್ಲೆಯ ಲಯನ್ಸ್ ಸೆಂಟರ್ ಫಾರ್ ದ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಮೂಲಕ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಯೋಜನೆಯಾದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಕೌಂಟೆಂಟ್ ಕಂ ಕ್ಲರ್ಕ್ (ಬಿ.ಕಾಂ ಪದವಿ ಗಣಕಯಂತ್ರದ ಅನುಭವ), ಕಚೇರಿ ಸೇವಕ (ಎಸ್.ಎಸ್.ಎಲ್.ಸಿ), ಪ್ರಾಸ್ಥೊಟಿಸ್ಟ್ ಮತ್ತು ಆರ್ಥೋಟಿಸ್ಟ್ (ಡಿಪೆÇ್ಲೀಮಾ ಇನ್.ಪಿ. ಒ/ಐ.ಟಿ.ಐ ಪಿಟ್ಟರ್ 2 ವರ್ಷದ ಕ್ಷೇತ್ರ ಮಟ್ಟದ ಅನುಭವ), ಲೆದರ್ ವರ್ಕರ್/ಶೂ ಮೇಕರ್ (ಸರ್ಟಿಫಿಕಟ್ ಇನ್ ಲೆದರ್ ವಕಿರ್ಂಗ್ ಆಂಡ್ ಶೂ ಮೇಕಿಂಗ್ 2 ವರ್ಷದ ಕ್ಷೇತ್ರ ಮಟ್ಟದ ಅನುಭವ), ಇಯರ್ ಮೊಲ್ಡ್ ಟೆಕ್ನಿಷಿಯನ್ (ಸರ್ಟಿಫಿಕೆಟ್ ಕೋರ್ಸ್ ಇನ್ ಇಯರ್ ಮೊಲ್ಡ್ ಟೆಕ್ನಾಲಜಿ), ಆಪ್ತಲ್ಮೋಲಜಿಸ್ಟ್ (ಪೆÇೀಸ್ಟ್ ಗ್ರಾಜುಯೇಷನ್ ಅಥವಾ ಡಿಪೆÇ್ಲೀಮಾ ಇನ್ ಆಪ್ತಲ್ಮೋಲಜಿ) ವಾರಕ್ಕೆ 02 ದಿನಗಳು ದಿನಕ್ಕೆ 1,000 ರೂ. ಗಳಂತೆ, ಸೈಕಿಯಾಟ್ರಿಸ್ಟ್ (ಪೆÇೀಸ್ಟ್ ಗ್ರಾಜುಯೇಷನ್ ಅಥವಾ ಸ್ರೆಕಿಯಾಟ್ರಿ ಮೆಡಿಸಿನ್) ವಾರಕ್ಕೆ 02 ದಿನಗಳು ದಿನಕ್ಕೆ 1,000 ರೂ.ಗಳಂತೆ ವೇತನ ನೀಡಲಾಗುವುದು.

ಅರ್ಹರು ನವೆಂಬರ್ 10ರೊಳಗೆ ಅಧ್ಯಕ್ಷರು/ ಕಾರ್ಯದರ್ಶಿ, ಲಯನ್ಸ್ ಸೆಂಟರ್ ಫಾರ್ ದ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ವೆನ್‍ಲಾಕ್ ಆಸ್ಪತ್ರೆ, ಮಂಗಳೂರು-575001 ಕಚೇರಿ ವಿಳಾಸಕ್ಕೆ ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 0824-2422300, 8747917610 ಅನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ವೆನ್‍ಲಾಕ್ ಆಸ್ಪತ್ರೆಯ ಲಯನ್ಸ್ ಸೆಂಟರ್ ಫಾರ್ ದ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love