Home Mangalorean News Kannada News ಮಂಗಳೂರು ವಿವಿ: ಪದವಿ ಪರೀಕ್ಷೆ ಫಲಿತಾಂಶ ಆನ್‌ಲೈನ್‌ ಮೂಲಕ ಶೀಘ್ರದಲ್ಲಿ ಸಾಧ್ಯ – ಕುಲಪತಿ

ಮಂಗಳೂರು ವಿವಿ: ಪದವಿ ಪರೀಕ್ಷೆ ಫಲಿತಾಂಶ ಆನ್‌ಲೈನ್‌ ಮೂಲಕ ಶೀಘ್ರದಲ್ಲಿ ಸಾಧ್ಯ – ಕುಲಪತಿ

Spread the love

ಮಂಗಳೂರು ವಿವಿ: ಪದವಿ ಪರೀಕ್ಷೆ ಫಲಿತಾಂಶ ಆನ್‌ಲೈನ್‌ ಮೂಲಕ ಶೀಘ್ರದಲ್ಲಿ ಸಾಧ್ಯ – ಕುಲಪತಿ

ಮಂಗಳೂರು:  ವಿಶ್ವ ವಿದ್ಯಾನಿಲಯವು 2026 ರ ಜೂನ್- ಜುಲೈ ತಿಂಗಳಲ್ಲಿ ನಡೆಸಿದ ಎಲ್ಲಾ ಪದವಿ ಕೋರ್ಸುಗಳ 6 ನೇ ಸೆಮಿಸ್ಟರ್‌ನ ಮತ್ತು ಬಿ.ಎಚ್.ಎಂ. ಕೋರ್ಸಿನ 8 ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾದ 17,347 ವಿದ್ಯಾರ್ಥಿಗಳ ಪೈಕಿ 17,076 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ.

261 ವಿದ್ಯಾರ್ಥಿಗಳ ಫಲಿತಾಂಶವನ್ನು ತಾಂತ್ರಿಕ ಕಾರಣಗಳಿಗಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ವಿದ್ಯಾರ್ಥಿಗಳು ಯುಯುಸಿಎಂಎಸ್ ವೋರ್ಟಲ್ ನಲ್ಲಿ ತಮ್ಮ ಲಾಗಿನ್ ಐಡಿ ಮೂಲಕ ಫಲಿತಾಂಶವನ್ನು ವಿಕ್ಷೀಸ ಬಹುದಾಗಿದೆ. ಉಳಿದಂತೆ ಎಲ್ಲಾ ಪದವಿಗಳ ದ್ವಿತೀಯ ಮತ್ತು ಚತುರ್ಥ ಸೆಮಿನ್ವರ್‌ಗಳ ಮತ್ತು ನಾನ್ ಎನ್ ಇ ಪಿ ಕಾರ್ಯಕ್ರಮಗಳ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ವಿಶ್ವ ವಿದ್ಯಾಲಯದ ಕುಲಪತಿಯವರು ತಿಳಿಸಿದ್ದಾರೆ.

ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಟ್ಯಾಬ್ಯುಲೇಶನ್ ಪ್ರಕ್ರಿಯೆಯನ್ನು ಆನ್.ಲೈನ್ ವ್ಯವಸ್ಥೆ ಮೂಲಕ ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದರಿಂದ ಮೌಲ್ಯಮಾಪನ ನಡೆಯುತ್ತಿರುವಾಗಲೇ ಫಲಿತಾಂಶಗಳನ್ನು ಶೀಘ್ರವಾಗಿ ಪ್ರಕಟಿಸಲು ಸಾಧ್ಯವಾಗಿದೆ. ಇದಕ್ಕೆ ಪೂರಕವಾಗಿ ಎಲ್ಲಾ ಮೌಲ್ಯಮಾಪನ ಕೇಂದ್ರಗಳ ಕಸ್ಟೋಡಿಯನ್, ಸಂಯೋಜಕರು, ಪರೀಕ್ಷಾ ಮಂಡಳಿ ಅಧ್ಯಕ್ಷರು, ಮೌಲ್ಯಮಾಪಕರು ಹಾಗೂ ಪರೀಕ್ಷಾಂಗ ವಿಭಾಗದ ಸಿಬಂದಿಯ ಪೂರ್ಣಪ್ರಮಾಣದ ಸಹಕಾರದಿಂದ ನಿಗದಿತ ಸಮಯದಲ್ಲಿ ಮೌಲ್ಯಮಾಪನವನ್ನು ಪೂರ್ಣಗೊಳಿಸಿದ್ದರಿಂದ ಅತ್ಯಂತ ಕಡಿಮೆ ಸಮಯದಲ್ಲಿ ಫಲಿತಾಂಶವನ್ನು ಪ್ರಕಟಿಸಲು ಸಾದ್ಯವಾಗಿದೆ ಎಂದಿದ್ದಾರೆ.

ಮರುಮೌಲ್ಯಮಾಪನಕ್ಕೆ ತಕ್ಷಣ ಅರ್ಜಿ ಆಹ್ವಾನಿಸಿ ಸದ್ಯದಲ್ಲಿಯೇ ವಿಶ್ವವಿದ್ಯಾನಿಲಯದಿಂದ ಯುಯುಸಿಎಂಎಸ್ ನಲ್ಲಿ ಪ್ರಕಟಣೆ ಹೊರಡಿಸಲಾಗುವುದು. ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುಲಪತಿ ತಿಳಿಸಿದ್ದಾರೆ.


Spread the love

Exit mobile version