ಮಂಗಳೂರು: ವ್ಯಕ್ತಿಗೆ ಹಲ್ಲೆ ಆರೋಪ: ತಂದೆ-ಮಗ ಬಂಧನ

Spread the love

ಮಂಗಳೂರು: ವ್ಯಕ್ತಿಗೆ ಹಲ್ಲೆ ಆರೋಪ: ತಂದೆ-ಮಗ ಬಂಧನ

ಮಂಗಳೂರು: ನಗರದ ಬೋಳೂರಿನ ನವೀನ್ ಸಾಲ್ಯಾನ್ ಎಂಬವರಿಗೆ ಬೋಳೂರು ಜಾರಂದಾಯ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಸ್ಥಳೀಯರಾದ ದೇವದಾಸ್ ಬೋಳೂರು (61) ಮತ್ತವನ ಮಗ ಸಾಯಿ ಕಿರಣ್ (21) ಎಂಬವರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಬಗ್ಗೆ ವರದಿಯಾಗಿದೆ.

ಗಾಯಗೊಂಡ ನವೀನ್ ಸಾಲ್ಯಾನ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದೇವದಾಸ್ ಬೋಳೂರು ಮತ್ತವನ ಮಗ ಸಾಯಿ ಕಿರಣ್‌ ನನ್ನು ಪೊಲೀಸರು ಬಂಧಿಸಿದ್ದಾರೆ‌.

ಈ ಘಟನೆಗೆ ಬೋಳೂರು ಮೊಗವೀರ ಮಹಾಸಭಾ ಸಂಘದ ಆಡಳಿತದ ಭಿನ್ನಾಭಿಪ್ರಾಯ ಹಾಗೂ ಹಳೆ ದ್ವೇಷವೇ ಕಾರಣ ಎನ್ನಲಾಗಿದೆ‌.

ಆರೋಪಿಗಳ ವಿರುದ್ಧ ಕೊಲೆಯತ್ನ ಸಹಿತ ವಿವಿಧ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love