ಮಂಗಳೂರು: ಸಾಮಾಜಿಕ ಕಾರ್ಯಕರ್ತೆ ಶಾರದಾ ಆಚಾರ್ಯ ನಿಧನ

Spread the love

ಮಂಗಳೂರು: ಸಾಮಾಜಿಕ ಕಾರ್ಯಕರ್ತೆ ಶಾರದಾ ಆಚಾರ್ಯ ನಿಧನ

ಮಂಗಳೂರು: ಮಂಗಳೂರು ನಗರದ ಸುಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಶಾರದಾ ಆಚಾರ್ಯ   ತಮ್ಮ 89ನೇ ವಯಸ್ಸಿನಲ್ಲಿ ದೈವಾಧೀನರಾದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರದ ಸಹಸಂಘಚಾಲಕ ಶ್ರೀ ಸುನಿಲ್ ಆಚಾರ್ಯರ ಮಾತೃಶ್ರೀಯವರು. ಜನ ಸಂಘದ ಕರ್ನಾಟಕ ಪ್ರಾಂತದ ಉಪಾಧ್ಯಕ್ಷರಾಗಿದ್ದರು. 3 ಅವಧಿಗಳ ಕಾಲ ಮಂಗಳೂರು ನಗರಸಭೆಯ ಸದಸ್ಯರಾಗಿದ್ದು 9 ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದರು. ನಂತರ ನಡೆದ ವಿಧಾನ ಸಭೆಯ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ಕೌಟ್ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಿರಿ ತೋಟಗಾರಿಕಾ ಸಂಘದ ಖಜಾಂಚಿಯಾಗಿದ್ದರು. ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಮಗಳನ್ನು   ಅಗಲಿದ್ದಾರೆ.


Spread the love