
Spread the love
ಮಂಗಳೂರು : ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದ ವೈದ್ಯ – ಪ್ರಕರಣ ದಾಖಲು
ಮಂಗಳೂರು : ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘಿಸಿದ ವೈದ್ಯರೊಬ್ಬರನ್ನು ಸೂಪರ್ ಮಾರ್ಕೆಟ್ ಸಿಬ್ಬಂದಿಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಮಂಗಳವಾರ ( ಮೇ 18) ಬೆಳಗ್ಗೆ ನಗರದ ಸೂಪರ್ ಮಾರ್ಕೆಟ್ ವೊಂದರಲ್ಲಿ ಈ ಘಟನೆ ನಡೆದಿದ್ದು, ಫೋನಿನಲ್ಲಿ ಮಾತಾಡುತ್ತಾ ಇದ್ದ ವೈದ್ಯರೊಬ್ಬರು ಮಾಸ್ಕ್ ಹಾಕದೆ ಬಿಲ್ ಕೌಂಟರ್ ಬಳಿ ನಿಂತಿದ್ದರು. ಇದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿಯೊಬ್ಬರು ವೈದ್ಯರಿಗೆ ದಯವಿಟ್ಟು ಮಾಸ್ಕ್ ಧರಿಸಿ, ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇರುವುದು ಎಂದಿದ್ದಾನೆ. ಇದಕ್ಕೆ ವೈದ್ಯ ಮತ್ತೆ ವಾಗ್ವಾದಕ್ಕೆ ಇಳಿದು, ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ನಿಯಮ ಉಲ್ಲಂಘಿಸಿದ ವೈದ್ಯರ ವಿರುದ್ಧ ಎಪಿಡೆಮಿಕ್ ಆ್ಯಕ್ಟ್ ಅನ್ವಯ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love
Crazy Doctor. I think he got exemption to wear mask.