ಮಂಗಳೂರು: ಸ್ಕೂಟರ್ ಸವಾರ ಬಾವಿಗೆ ಬಿದ್ದು ಸಾವು

Spread the love

ಮಂಗಳೂರು: ಸ್ಕೂಟರ್ ಸವಾರ ಬಾವಿಗೆ ಬಿದ್ದು ಸಾವು

ಮಂಗಳೂರು : ಚಲಿಸುತ್ತಿದ್ದ ಸ್ಕೂಟರೊಂದು ಸ್ಕಿಡ್ ಆದ ಪರಿಣಾಮ ಸವಾರ ಆಯತಪ್ಪಿ ಪಕ್ಕದಲ್ಲೇ ಇದ್ದ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಪಕ್ಕಲಡ್ಕ ಸಮೀಪದ ಬಜಾಲ್ ಎಂಬಲ್ಲಿ ಸೋಮವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಅಜಿತ್ ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ ಸುಮಾರು 7:15ರ ವೇಳೆಗೆ ಬಜಾಲ್ ಜನ ನಿಬಿಡವಾದ ಎತ್ತರದ ಪ್ರದೇಶದಲ್ಲಿ ಚಲಿಸುತ್ತಿದ್ದ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇದ್ದ ಆವರಣ ಇರುವ ಬಾವಿಗೆ ಬಿದ್ದಿದ್ದಾನೆ.

ಘಟನೆ ನಡೆದ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಬಂದಿಗಳು ಬಾವಿಗೆ ಬಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ವ್ಯಕ್ತಿ ಸಾವನ್ನಪಿದ್ದ ಎನ್ನಲಾಗಿದೆ.


Spread the love