
ಮಂಗಳೂರು: 42 ವರ್ಷದ ವ್ಯಕ್ತಿ ನಾಪತ್ತೆ
ಮಂಗಳೂರು: ವ್ಯವಹಾರದ ವಿಷಯದಲ್ಲಿ ಬೇಸರಗೊಂಡು ಪತಿ ಮನೆ ಬಿಟ್ಟು ಹೋದ ಕುರಿತು ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಅಶ್ಫಕ್ (42) ಎಂಬವರು ತೊಕ್ಕೊಟ್ಟಿನ ಹಿದಾಯತ್ ನಗರದ ಬಳಿ ಫ್ಯಾಕ್ಟರಿ ಇಟ್ಟುಕೊಂಡಿದ್ದು ಇದರ ಜೊತೆಗೆ ತುಪ್ಪ ಮಾರಾಟದ ಕೆಲಸವನ್ನು ಕೂಡ ಮಾಡುತ್ತಿದ್ದು ಜೂನ್ 14 ರಂದು ಕೆಲಸಕ್ಕೆ ತೆರೆಳಿದ್ದು ರಾತ್ರಿಯಾದರೂ ಮನೆಗೆ ಬಾರದೇ ಇದ್ದು ಅಲ್ಲದೆ ಅವರ ಮೊಬೈಲ್ ಗೆ ಕರೆ ಮಾಡಿದಾಗಲೂ ಕರೆ ಸ್ವೀಕರಿಸಲಾಗದೆ ಸ್ವೀಚ್ ಆಫ್ ಬರುತ್ತಿರುವುದರಿಂದ ಅಶ್ಫಕ್ ಅವರ ಪತ್ನಿ ಅಫ್ರೀನ್ ಅವರು ಆತನ ಸ್ನೇಹಿತರು ಸಂಬಂಧಿಕರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆಯಲಿಲ್ಲ. ಜೂನ್ 13ರಂದು ಬೆಳಿಗ್ಗೆ ಕೊನೆಯದಾಗಿ ಅವರ ತಾಯಿಗೆ ತನ್ನ ಮನೆಯಿಂದ ಫೋನ್ ಕರೆ ಮಾಡಿ, ನನ್ನ ಮೊಬೈಲ್ ಫೋನ್ ಸರಿ ಇಲ್ಲ ರಿಪೇರಿ ಮಾಡಿದ ನಂತರ ನಿಮ್ಮಲ್ಲಿ ಮಾತನಾಡುತ್ತೇನೆ.” ಎಂಬುದಾಗಿ ಹೇಳಿರುತ್ತಾರೆ.
ವ್ಯವಹಾರದ ವಿಚಾರದಲ್ಲಿ ಬೇಸರಗೊಂಡು ಮನೆ ಬಿಟ್ಟು ತೆರಳಿರುವ ಸಂಶಯ ಇದ್ದು ಈ ತನಕ ಅವರು ಬಾರದೇ ಇದ್ದು ಅವರ ಮೊಬೈಲ್ ಸ್ವೀಚ್ ಆಫ್ ಆಗಿದ್ದು, ಹುಡುಕಾಡಿ ಠಾಣೆಗೆ ಬಂದು ಆತನ ಪತ್ನಿ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ.
ಮಹಮ್ಮದ್ ಅಶ್ಫಕ್ ಅವರು 5.5 ಅಡಿ ಉದ್ದ, ಗೋದಿ ಮೈಬಣ್ಣ ಸಾಧಾರಣ ಶರೀರ ಹೊಂದಿದ್ದಾರೆ. ಮನೆಯಿಂದ ತೆರಳುವಾಗ ಜೀನ್ಸ್ ಪ್ಯಾಂಟ್ ಮತ್ತು ಗ್ರೇ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು. ಮಲೆಯಾಳಂ, ಕನ್ನಡ, ತುಳು, ಇಂಗ್ಲೀಷ್ ಹಿಂದಿ ಬಾಷೆಯನ್ನು ಮಾತನಾಡುತ್ತಾರೆ.