ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ಕಳ್ಳತನ: ಅಂತರ್‌ ಜಿಲ್ಲಾ ಕಳ್ಳನ ಬಂಧನ

Spread the love

ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ಕಳ್ಳತನ: ಅಂತರ್‌ ಜಿಲ್ಲಾ ಕಳ್ಳನ ಬಂಧನ

ಉಡುಪಿ: ಉಡುಪಿ ನಗರದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್‌ ಜಿಲ್ಲಾ ಕಳವು ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳದ ಸುರೇಶ್ ಪೂಜಾರಿ ಬಂಧಿತ ಆರೋಪಿ.

ಬನ್ನಂಜೆಯಲ್ಲಿರುವ ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ಸೆ.14ರಂದು ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಸ್ಪತ್ರೆಯ ಆಸುಪಾಸಿನ ಕಟ್ಟಡ, ಮನೆ, ಅಂಗಡಿಗಳಲ್ಲಿರುವ ಸಿಸಿಟಿವಿ ಫೂಟೇಜ್‌ಗಳನ್ನು ಪತ್ತೆ ಮಾಡಲಾಗಿತ್ತು. ಆರೋಪಿಯ ಚಹರೆಗಳು ಸುರೇಶ್ ಪೂಜಾರಿಗೆ ಹೋಲಿಕೆಯಾಗಿತ್ತು. ಅದರಂತೆ ಪೊಲೀಸರು ಆತನನ್ನು ಅ.11ರಂದು ಬೆಳಗ್ಗೆ ಉಡುಪಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬಂಧಿಸಿದರು.

ಈತ ಈ ಹಿಂದೆ ಶಿರ್ವ, ಹಿರಿಯಡ್ಕ, ಕಾರ್ಕಳ ನಗರ ಠಾಣೆ, ಪಡುಬಿದ್ರಿ, ದಾವಣಗೆರೆ, ಬೆಳಗಾಂ, ಮುಲ್ಕಿ ಭಾಗಗಳಲ್ಲಿ ಕಳ್ಳತನ ನಡೆಸಿದ್ದ ಬಗ್ಗೆ ಆರೋಪ ಇದೆ. ಉಡುಪಿಯ ಮಂಜುನಾಥ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ಮಲ್ಪೆ ಸೊಸೈಟಿಯಲ್ಲಿ ನಗದು ಹಾಗೂ ಉಡುಪಿಯ ಗರಡಿ ರಸ್ತೆಯಲ್ಲಿ ಬೈಕ್ ಕಳ್ಳತನ ನಡೆಸಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನಿಂದ ಒಟ್ಟು 4,33,000ರೂ., 2 ಬೈಕ್ ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. . ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


Spread the love

Leave a Reply