ಮಂಡ್ಯದಲ್ಲಿ ಕೆಮಿಕಲ್ ಫ್ರೀ ಬೆಲ್ಲದ ತಯಾರಿಕಾ ಘಟಕ ಉದ್ಘಾಟನೆ

Spread the love

ಮಂಡ್ಯದಲ್ಲಿ ಕೆಮಿಕಲ್ ಫ್ರೀ ಬೆಲ್ಲದ ತಯಾರಿಕಾ ಘಟಕ ಉದ್ಘಾಟನೆ

ಮಂಡ್ಯ: ಪ್ರಾಯೋಗಿಕವಾಗಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ (ಆಗ್ರ್ಯಾನಿಕ್ ) ಕೆಮಿಕಲ್ ಫ್ರೀ ಬೆಲ್ಲವನ್ನು ತಯಾರು ಮಾಡುವ ಘಟಕವನ್ನು ಬೆಂಗಳರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್. ವಿ. ಸುರೇಶ್ ರವರು ವಿ.ಸಿ ಫಾರಂನಲ್ಲಿ ಉದ್ಘಾಟಿಸಿದರು.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ವಲಯ ಕೃಷಿ ಸಂಶೋಧನ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾನಿಲಯ, ವಿ ಸಿ ಫಾರಂ, ಮಂಡ್ಯ ತಾಲೂಕು ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು, ಇವರುಗಳ ಸಂಯುಕ್ತಶ್ರಯದಲ್ಲಿ ನಡೆದ ಕೃಷಿ ಯಂತ್ರೋಪಕರಣಗಳ ಮೇಳ 2023 ಹಾಗೂ ಜಾಗರಿ ಪಾರ್ಕ್ ನ ಇನ್ಕ್ಯುಬೇಷನ್ ಕೇಂದ್ರದ ಪ್ರಾರಂಭೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಖಾಸಗಿಯವರ ಸಹಭಾಗಿತ್ವದಲ್ಲಿ ರಾಸಾಯನಿಕ ಮುಕ್ತ ಬೆಲ್ಲದ ಉತ್ಪಾದನೆಯನ್ನು ಮಾಡಲಾಗುವುದು. ಇದಕ್ಕಾಗಿ ಸುತ್ತಮುತ್ತಲಿನ ರೈತರು ಮತ್ತು ವಿ.ಸಿ ಫಾರಂ ಅವರು ಉತ್ತಮ ಗುಣಮಟ್ಟದ ಕಬ್ಬು ಉತ್ಪನ್ನ ಮಾಡಿ ನೀಡಬೇಕು. ರಾಸಾಯನಿಕ ಮುಕ್ತ ಬೆಲ್ಲವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಕೃಷಿ ವಿಶ್ವವಿದ್ಯಾನಿಲಯದ ಅಭಿಲಾಷೆಯಾಗಿದೆ. ಈ ಘಟಕ ಉತ್ತಮವಾದ ಕೆಲಸ ನಿರ್ವಹಿಸಿ ರೈತ ಸಮುದಾಯಕ್ಕೆ ಕಬ್ಬು ಬೆಳೆಗಾರರಿಗೆ ವರದಾನವಾಗಲಿದೆ.

ಕೃಷಿ ಯಂತ್ರೋಪಕರಣಗಳ ಬಹಳ ಉಪಯುಕ್ತತೆಯನ್ನು ಪಡೆದಿದ್ದು ರೈತ ಬಾಂಧವರಿಗೆ ಕೃಷಿಯಲ್ಲಿ ಹಾಗೂ ಬೆಳೆದ ಫಸಲನ್ನು ನಂತರದ ದಿನಗಳಲ್ಲಿ ಕುಯ್ಯುವ ತಂತ್ರಜ್ಞಾನಕ್ಕೆ ಬೇಕಾಗುವಂತಹ ಸಾಕಷ್ಟು ಯಂತ್ರೋಪಕರಣಗಳ ಮಾಹಿತಿ ಕಾರ್ಯಕ್ರಮದಲ್ಲಿ ಲಭ್ಯವಿದೆ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಯಂತ್ರೋಪಕರಣಗಳು ಇಲ್ಲದಿದ್ದರೆ ಕೃಷಿ ಮಾಡುವುದು ತುಂಬಾ ಕಠಿಣದ ಪರಿಸ್ಥಿತಿ ಇಂದಿನ ದಿನಗಳಲ್ಲಿ ಕಂಡು ಬರುತ್ತಿದೆ. ಹೊಸ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಯುವ ಸಮೂಹ ಪಟ್ಟಣಗಳತ್ತ ವಲಸೆ ಹೋಗುತ್ತಿರುವುದನ್ನು ತಡೆಯಬೇಕು. ಕೃಷಿ ಯಂತ್ರೋಪಕರಣಗಳಿಂದ ರೈತರಿಗೆ ಸಮಯದ ಉಳಿತಾಯ ಸಹ ಕೊಡ ಆಗುತ್ತದೆ. ಪ್ರಸ್ತುತದ ದಿನಗಳಲ್ಲಿ ಕೃಷಿ ರಂಗದಲ್ಲಿ ಆಗುವಂತಹ ಅನೇಕ ತೊಂದರೆಗಳ ಬಗ್ಗೆ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ನೆರವಾಗುವಂತೆ ಅನೇಕ ಮಾಹಿತಿಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳ ಮೂಲಕ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೃಷಿ ವಿ.ವಿ ಸದಸ್ಯರುಗಳಾದ ಡಾ. ಪಿ.ಎಚ್ ರಾಮಾಂಜನಿಗೌಡ, ಡಾ. ಟಿ.ಎಂ ಅರವಿಂದ್. ಡಾ. ಓ.ಎಸ್ ದಯಾನಂದ, ಡಾ. ಆರ್ ಶ್ರೀರಾಮ, ಹಾಸನ ಜಿಲ್ಲೆಯ ಮಹಾವಿದ್ಯಾನಿಲಯದ ಡೀನ್ ಡಾ. ಎಸ್.ಎನ್ ವಾಸುದೇವನ್, ವಿಸಿ ಫಾರ್ಮ್ ನ ಮಹಾವಿದ್ಯಾನಿಲಯದ ಡಾ.ಎಸ್.ಎಸ್ ಪ್ರಕಾಶ್, ವಲಯ ಕೃಷಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಶಿವಕುಮಾರ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎನ್.ಟಿ ನರೇಶ್, ಕೃಷಿ ಯಂತ್ರೋಪಕರಣಗಳ ಪ್ರಯೋಜನ ಮುಖ್ಯಸ್ಥರಾದ ಡಾ. ಎಂ.ಎಸ್ ಶ್ರೀದೇವಿ, ಜಾಗರಿ ಪಾರ್ಕ್ ನ ಮುಖ್ಯಸ್ಥರಾದ ಡಾ. ಕೆ.ವಿ ಕೇಶವಯ್ಯ, ಸಹ ವಿಸ್ತರಣಾ ನಿರ್ದೇಶಕ ಡಾ. ಡಿ ರಘುಪತಿ ಹಾಗೂ ಇನ್ನಿತರರಿದ್ದರು.


Spread the love