ಮಕ್ಕಳ ಅಸಾಧಾರಣ ಪ್ರಶಸ್ತಿ ಪಡೆದ ಗೌತಮಿಗೆ ಸನ್ಮಾನ

Spread the love

ಮಕ್ಕಳ ಅಸಾಧಾರಣ ಪ್ರಶಸ್ತಿ ಪಡೆದ ಗೌತಮಿಗೆ ಸನ್ಮಾನ

ಮಂಗಳೂರು: “ರಾಜ್ಯೋತ್ಸವ ಸಾಧಕ ಪುರಸ್ಕಾರ ಪ್ರಶಸ್ತಿ” “ಮಕ್ಕಳ ಅಸಾಧಾರಣ ಪ್ರಶಸ್ತಿ” ಪಡೆದಿರುವ ಗೌತಮಿಯನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಠಾಣೆಯಲ್ಲಿ ಗೌರವಿಸಿ ಸನ್ಮಾನಿಸಿದರು.

ಗೌತಮಿ ಸಿ.ಎಸ್. ಈಕೆಯು ಮಂಗಳೂರು ನೀರುಮಾರ್ಗ, ಕೆಲರೈ ಟೌನ್ ಶಿಪ್ ನಿವಾಸಿ ಶ್ಯಾಮಲಾ ಮತ್ತು ಚಂದ್ರಶೇಖರ ಕೆ. ಮಂ. ದಕ್ಷಿಣ ಪೊಲೀಸ್ ಠಾಣೆಯ ಎ.ಎಸ್.ಐ. ಇವರ ಪುತ್ರಿಯಾಗಿರುವ ಇವರು 2022 ನೇ ವರ್ಷದ ಗಣರಾಜ್ಯೋತ್ಸವದ ಬಗ್ಗೆ ದೆಹಲಿಯಲ್ಲಿ ಕರ್ನಾಟಕ ಹಾಗೂ ಗೋವಾ ಡೈರೆಕ್ಟೋರೇಟ್ ಏರ್ ವಿಂಗ್ ವಿಭಾಗದಲ್ಲಿ ಬೆಸ್ಟ್ ಕೆಡೆಟ್ ಆಗಿ ಪ್ರತಿನಿಧಿಸಿರುವ ಮಂಗಳೂರು SIX ಕರ್ನಾಟಕ ಏರ್ ಸ್ಕ್ವಾಡ್ರನ್ NCC ಸೈಂಟ್ ಎಲೋಶಿಯಸ್ ಕಾಲೇಜಿನದ್ವಿತೀಯ ವರ್ಷದ ಬಿ. ಎಸ್ಸಿ. ವಿಧ್ಯಾರ್ಥಿನಿಯಾಗಿರುತ್ತಾರೆ.


Spread the love