ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ – ಪ್ರಸಾದ್ ರಾಜ್ ಕಾಂಚನ್

Spread the love

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ – ಪ್ರಸಾದ್ ರಾಜ್ ಕಾಂಚನ್

ಉಡುಪಿ: ಶಾಸಕನಾಗಿ ಆಯ್ಕೆಯಾಗಿ ಬಂದಲ್ಲಿ ಕ್ಷೇತ್ರದ ಮಕ್ಕಳನ್ನು ಬುದ್ದಿವಂತರಾನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.

ಅವರು ತೆಂಕನಿಡಿಯೂರು ವಾರ್ಡ್ ಕಾಂಗ್ರೆಸ್ ಮುಖಂಡರಾದ ಸದಾಶಿವ ಕಟ್ಟೆಗುಡ್ಡೆ ನೇತೃತ್ವದಲ್ಲಿ ರಾದ್ಮಾ ರೆಸಿಡೆನ್ಸಿಯಲ್ಲಿ ವಿಧಾನ ಸಭಾ ಚುನಾವಣೆ ಪೂರ್ವಭಾವಿಯಾಗಿ ಕಾಂಗ್ರೆಸ್ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದರು.

ಪಕ್ಷ ಸಂಘಟನೆಯೊಂದಿಗೆ ಅಭ್ಯರ್ಥಿಯ ಗೆಲುವೆಗೆ ಪ್ರತಿಯೊಬ್ಬ ಕಾರ್ಯಕರ್ತನು ಪ್ರಾಮಾಣಿಕವಾಗಿ ಕೆಲಸ ಮಾಡುವುದರೊಂದಿಗೆ ಪಕ್ಷವನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ,ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ,ಅಮೃತ ಶೆಣೈ, ಮಮತಾ ಶೆಟ್ಟಿ, ರವಿರಾಜ್, ಧನಂಜಯ್ ಕುಂದರ್, ಕೀರ್ತಿ ಶೆಟ್ಟಿ ,ಗೋಪಾಲಕೃಷ್ಣ ಶೆಟ್ಟಿ, ನಾಗೇಶ್ ದೇವಾಡಿಗ, ಮೀನಾ ಪಿಂಟೊ, ಯತೀಶ್ ಕರ್ಕೇರ, ಗಣೇಶ್ ನೇರ್ಗಿ,ಪ್ರಖ್ಯಾತ್ ಶೆಟ್ಟಿ, ಹಿರಿಯರು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.


Spread the love