ಮಕ್ಕಳ ಮಾನಸಿಕ ಆರೋಗ್ಯ ಸಂರಕ್ಷಣಾ ಅಭಿಯಾನ

Spread the love

ಮಕ್ಕಳ ಮಾನಸಿಕ ಆರೋಗ್ಯ ಸಂರಕ್ಷಣಾ ಅಭಿಯಾನ

ಇತ್ತೀಚಿನ ದಿನಗಳಲ್ಲಿ (ಹದಿಹರೆಯದ ಶಾಲಾ ಮಕ್ಕಳಲ್ಲಿ ಮಾನಸಿಕ ಖಿನ್ನತೆ, ವಿಪರೀತ ಒತ್ತಡ, ಮನೋದೈಹಿಕ ಅನಾರೋಗ್ಯ ಹೆಚ್ಚಾಗುತ್ತಿದೆ. ನಾಳಿನ ಸುಂದರ ಬದುಕು ಕಟ್ಟಿ ಸಮೃದ್ಧ ಸಮಾಜ ನಿರ್ಮಿಸಬೇಕಾದ ನಮ್ಮ ಮಕ್ಕಳು ಆತ್ಮಹತ್ಯೆಯಂತಹಾ ದುರಂತದ ದಾರಿ ಹಿಡಿಯುವುತ್ತಿರುವುದು ಎಲ್ಲರಿಗೂ ಅಘಾತವುಂಟು ಮಾಡುತ್ತಿರುವ ವಿಚಾರವಾಗಿದೆ.

ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಇಂತಹ ಅನಪೇಕ್ಷಿತ ಮನೋಸ್ಥಿತಿಯನ್ನು ಎಳವೆಯಲ್ಲಿ ಪತ್ತೆ ಹಚ್ಚಿ ಸಾಂತ್ವನ, ಧೈರ್ಯ ಹಾಗೂ ಸ್ವಸಾಮಥ್ರ್ಯದ ಮೇಲೆ ನಂಬಿಕೆ ಉಂಟಾಗುವಂತೆ ಮಾಡಿ ಆತ್ಮಸ್ಥೆರ್ಯದಿಂದ ಜೀವನದ ಸವಾಲುಗಳನ್ನು ಎದುರಿಸುವಂತೆ ಮಾಡ ಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಮನೋಸ್ಥೈರ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಮಕ್ಕಳ ಮನಸ್ಸಲ್ಲೂ ಹತ್ತು ಹಲವು ವಿಚಾರ, ಯೋಚನೆ ಯೋಜನೆಗಳಿವೆ ಅವೆಲ್ಲವೂ ಮಿದುಳಿನ ವಿಕಸನಕ್ಕೆ ತಕ್ಕಂತೆ ಬೆಳೆಯುತ್ತಾ ಹೋದಂತೆ ಮಿದುಳಿನ ಜೊತೆ ಮನಸ್ಸು ಮಾಗುತ್ತಾ ಪ್ರಬುದ್ಧತೆಯತ್ತ ಸಾಗುತ್ತದೆ. ಕೆಲವೊಮ್ಮ ಅನುವಂಶಿಕವಾಗಿಯೋ, ಸುತ್ತಲಿನ ಪರಿಸರದಿಂದ ಅಥವಾ ಮನೋ ಸಾಮಾಜಿಕ ಕಾರಣದಿಂದಾಗಿಯೋ, ನ್ಯೂನ್ಯತೆ, ಏರುಪೇರು, ಉಂಟಾಗಿ ಮಿದುಳಿನ ವಿಕಸನ ಕುಂಠಿತವಾಗುವುದೋ ಅಥವಾ ಸಂತುಲನ ತಪ್ಪುವುದು ಆಗಬಹುದು. ಆದ್ದರಿಂದ ಮಕ್ಕಳ ಮನಸ್ಸಿನಲ್ಲೂ, ಗೊಂದಲ, ತೊಂದರೆಗಳುಂಟಾಗಿ ಮಾನಸಿಕ ರೋಗಗಳು ಬರಬಹುದು.

ಮನಸ್ಸು ಎಂಬುದು ಯಾರಿಗೆಲ್ಲಾ ಇದೆಯೋ ಅವರಿಗೆಲ್ಲರಿಗೂ ಮಾನಸಿಕ ಕಾಯಿಲೆ ಬರಬಹುದು ಎಂಬುದನ್ನು ಅರ್ಥ ಮಾಡಿಕೊಂಡರೆ ಆಗ ಮಕ್ಕಳಿಗೂ ಮಾನಸಿಕ ಕಾಯಿಲೆಗಳು ಬರಬಹುದು ಎಂಬುದನ್ನು ಸರಳವಾಗಿ ಅರ್ಥಮಾಡಿಕೊಳ್ಳಬಹುದು. ವಯಸ್ಕರಲ್ಲಿ ಕಾಣಿಸಿಕೊಳ್ಳುವ ಬಹಳಷ್ಟು ಕಾಯಿಲೆಗಳು ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದು. ಹದಿಹರೆಯದ ವಯಸ್ಸಿನಲ್ಲಿ ಇಂಥ ಕಾಯಿಲೆಗಳ ಮೊದಲ ಉದ್ಭವದ ಸಂಭವವೂ ಇರುತ್ತದೆ. ಹುಟ್ಟಿನಿಂದಲೇ ಬರುವ ಬುದ್ಧಿಮಾಂದ್ಯತೆ ಅಲ್ಲದೆ ಕಲಿಕೆಯಲ್ಲಿ ಹಿಂದೆ ಬೀಳುವ ನ್ಯೂನ್ಯತೆ ಸಂವೇದನೆ ಸ್ಪಂದನೆ ಮಾಡಲಾಗದ ನಲೀನತೆ, ಅತಿ ಚಾಂಚಲ್ಯ ಹಾಗೂ ಅತಿಚಟುವಟಿಕೆಯ ಕಾಯಿಲೆ ಮಾತು ಧಿಕ್ಕರಿಸಿ ದುರ್ವತ್ರನೆ – ಕೆಟ್ಟ ಚಾಳಿಗಳನ್ನು ಇಟ್ಟುಕೊಳ್ಳುವ ಕಾಯಿಲೆ, ಮಾಂಸ ಖಂಡಗಳ ಅದುರುವಿಕೆ 2 ವರ್ಷದ ನಂತರವೂ ಹಾಸಿಗೆಯಲ್ಲೇ ಮಲಮೂತ್ರ ವಿಸರ್ಜಿಸುವ ಕಾಯಿಲೆ, ಭಾμÉಯ ಉಚ್ಚಾರಣೆ, ಕಲಿಕೆಯ ಕಾಯಿಲೆ, ಸ್ವಭಾವ ಅಬ್ಬಾರ ಸಂಬಂಧಿ ಕಾಯಿಲೆಗಳು ಇತ್ಯಾದಿ ಶಾಲಾ ಮಕ್ಕಳನ್ನು ಮನೋವ್ಯಾದಿಗಳಾಗಿ ಬಾಧಿಸಬಹುದು.

ಇದಲ್ಲದೆ ವಯಸ್ಕರನ್ನು ಕಾಡುವ ಬೇರೆ ಮಾನಸಿಕ ಕಾಯಿಲೆಗಳಾದ ಚಿತ್ತವಿಕಲ್ಪತೆ ಖಿನ್ನತೆ, ಆತಂಕ ಮನೋಬೇನೆ, ಗೀಳು ಕಾಯಿಲೆ ಭಯದ ಕಾಯಿಲೆ ಮಾದಕ ವಸ್ತುಗಳ ದುರ್ಬಳಕೆ, ವ್ಯಸನ, ಇತ್ತೀಚಿನ ದಿನಗಳ ಅಂತರ್ಜಾಲ ವ್ಯಸನ ಇವೆಲ್ಲವೂ ಮಕ್ಕಳು ಹಾಗೂ ಹದಿಹರೆಯದವರನ್ನು ಕಾಡಬಹುದಾಗಿದೆ. ಈ ಗುರುತರವಾದ ಜವಾಬ್ದಾರಿ ಪೆÇೀಷಕರೊಂದಿಗೆ, ಮಕ್ಕಳೊಡನೆಯೇ ನಿಕಟ ಸಂರ್ವಕದಲ್ಲಿರುವ ಜಾಣ ಶಿಕ್ಷಕರದ್ದೂ ಆಗಿರುತ್ತದೆ. ಅವರ ತಾಳ್ಮೆ, ಪ್ರೀತಿ ಪೆÇ್ರೀತ್ಸಾಹ ಬೆಂಬಲ, ಮಾರ್ಗದರ್ಶನ, ಜೊತೆಗೆ ಇದರ ಬಗೆಗಿನ ಅರಿವಿನ ಅಗತ್ಯವೂ ಅತ್ಯಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ, ಶಾಲಾ ಶಿಕ್ಷಕರಿಗೆ, ಮಕ್ಕಳಲ್ಲಿ ಕಂಡುಬರುವ ಮಾನಸಿಕ ಕಾಯಿಲೆ ಅಥವಾ ನ್ಯೂನ್ಯತೆಗಳ ಬಗ್ಗೆ ಸಮಗ್ರ ಮಾಹಿತಿ, ತರಬೇತಿ ನೀಡಿ ಅದರ ಬಗ್ಗೆ ಅವರಲ್ಲಿ ಸ್ಪಷ್ಟ ಮೂಡುವಂತಾಗಿ, ಸಮಸ್ಯೆಯನ್ನು ಗುರುತಿಸಿ, ಸಹಾಯ, ಬೆಂಬಲ ನೀಡುವ್ಯದೇ ಈ ಅಭಿಯಾನದ ಪ್ರಮುಖ ಗುರಿಯಾಗಿದೆ.

ಪ್ರತಿ ಶಾಲೆಯಿಂದ ಶಿಕ್ಷಕರನ್ನು ಗುರುತಿಸಿ, ಅವರಿಗೆ ಸರಿಯಾದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೂಡಿಸುವ ಧೈಯ ಈ ಅಭಿಯಾನದ್ದಾಗಿದೆ.

ಶಿಕ್ಷಕರಿಗೆ ಇರಬೇಕಾದ ಅರ್ಹತೆ:
ಮಕ್ಕಳ ಬಗೆಗಿನ ಕಾಳಜಿ, ಅವರ ಸಂಪೂರ್ಣ ಆರೋಗ್ಯದ ಬಗೆಗಿನ ನೈಜ ಕುಕ್ಕುಲಾತಿ, ಮಕ್ಕಳನ್ನು ತಿದ್ದಬಲ್ಲ ಹಾಳ ಹಾಗು ಹೊಸದನ್ನು ಅರಿವ ಕುತೂಹಲವಿರಬೇಕು. ಹೆಚ್ಚಿನ ಮಕ್ಕಳ ಸಂಪರ್ಕ ಹೊಂದಿರುವ ಶಿಕ್ಷಕರು ವಿವಿಧ ಸಂಪನ್ಮೂಲ ವ್ಯಕ್ತಿಗಳ ನಡುವೆ ಸಮನ್ವಯತ ಸಾದಿಸುವ ಕ್ಷಮತೆ ಇರುವವರು, ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸಮಯ ನೀಡಬಲ್ಲವರು, ಮಕ್ಕಳ ಬೆಳವಣಿಗೆಗಳ ಸ್ಥೂಲ ಪರಿಚಯ ಹೊಂದಿರುವರು, ಮಕ್ಕಳಿಗಾಗಿ ಕಾರ್ಯಾಗಾರಗಳು, ಮಾಹಿತಿ ಶಿಬಿರ ಸಂಯೋಜನೆ ಮಾಡುವ ಆಸಕ್ತಿ ಹೊಂದಿದವರಾಗಿರಬೇಕು.

ಆ ಶಿಕ್ಷಕರನ್ನು ಆಯ್ಕೆ ಮಾಡಿದ ತರುವಾಯ ಅಂತಹ ಶಿಕ್ಷಕರನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವ ಕಾರಾಗಾರದಲ್ಲಿ ನುರಿತ ತಜ್ಞರಿಂದ, ಪ್ರಾತ್ಯಕ್ಷಿಕೆ ಸಂವಾದ ಹಾಗೂ ಚರ್ಚಾಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಸೂಕ್ತ ಮಾಹಿತಿಗಳೊಂದಿಗೆ ಆ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿಸಿ ಸಂಬಂಧಿದ ಶಾಲೆಗಳಲ್ಲಿ ಒಂದು ಆಪ್ತ ಸಲಹಾ ಕೋಶ ಕೇಂದ್ರ ತೆರೆಯಲು ಪೆÇ್ರೀತ್ಸಾಹಿಸಲಾಗುವುದು. ಪ್ರತಿ ಶಾಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಮಕ್ಕಳಿಗೆ ಮಾಹಿತಿ ಕಾರ್ಯಾಗಾರ ಪ್ರಾತ್ಯಕ್ಷಿಕೆ, ಸಂವಾದ ಹಾಗೂ ಮಾಹಿತಿ ಚರ್ಚಾಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸ ಬೇಕಾಗುತ್ತದೆ. ತಿಂಗಳಿಗೊಮ್ಮೆ ಸಂಪನ್ಮೂಲ ವ್ಯಕ್ತಿಗೆ 2, 3 ಶಿಕ್ಷಕರಿಗೆ ಸೂಕ್ತ ಮಾಹಿತಿಗಳನ್ನು ಒದಗಿಸಲಾಗುವುದು.

ಒಟ್ಟಿನಲ್ಲಿ ಈ ಅಭಿಯಾನವು ನಮ್ಮ ಜಿಲ್ಲೆಯ ಪ್ರೌಢ ಶಾಲಾ ಮಕ್ಕಳ ಮನಸ್ಸಲ್ಲಿ ಅಮಿತ ವಿಜ್ಞಾನ, ಸುದೃಢತೆ, ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬಲ್ಲ ಮನೋಬಲ ಸೃಷ್ಠಿಸುವಂತೆ ಮಾಡಬೇಕಾಗಿದೆ. ಈ ಎಲ್ಲಾ ಉದ್ದೇಶಗಳನ್ನು ಹೊಂದಿ ನಡೆಯಲಿರುವ ಈ ಮಹತ್ವಕಾಂಕ್ಷಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿಸಿ, ಜಿಲ್ಲೆಯ ಯುವ ಮನಸ್ಸುಗಳನ್ನು ಸದೃಡ ಗೊಳಿಸಬೇಕು.

ಸೂಚನೆ:
ಪ್ರತಿ ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮುತುವರ್ಜಿ ವಹಿಸಿ ಪ್ರತಿ ಶಾಲೆಯಿಂದ ಓರ್ವ ಶಿಕ್ಷಕರನ್ನು ಆ ಉದ್ದೇಶಕ್ಕೆ ನೋಡಲ್ ಅಧಿಕಾರಿ ಅಥವಾ ಮೆಂಟರ್ ಆಗಿ ನೇಮಿಸಬೇಕು. ನೇಮಕಗೊಂಡ ಓರ್ವ ಶಿಕ್ಷಕರು ಶಾಲೆಯಲ್ಲಿ ಕ್ರಿಯಾತ್ಮಕವಾಗಿ ಮತ್ತು ಚಟುವಟಿಕೆ ಮೂಲಕ ಮಕ್ಕಳನ್ನು ಉತ್ತೇಜಿಸುವ ಮನೋಬಾವ ಹೊಂದಿರುವವರಾಗಿರಬೇಕು ಮತ್ತು ಆಸಕ್ತಿವಹಿಸಿಕೊಂಡು ಅನುμÁ್ಠನಗೊಳಿಸಬೇಕು. ನೇಮಕಗೊಂಡ ಶಿಕ್ಷಕರಿಗೆ ಜಿಲ್ಲಾ ಹಂತದಲ್ಲಿ ಒಂದು ದಿನ ಶಾಲಾ ಮಕ್ಕಳ ಮಾನಸಿಕ ಆರೋಗ್ಯ ಸಂರಕ್ಷಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ನುರಿತ ತಜ್ಞರಿಂದ ತರಬೇತಿ ಹಾಗೂ ಕಾರ್ಯಾಗಾರ ನಡೆಸಲಾಗುವುದು. ಶಾಲೆಯಲ್ಲಿ ಮಾನಸಿಕ ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಆಪ್ತ ಸಲಹಾ ಕೇಂದ್ರವನ್ನು ತೆರೆಯುವುದು. ಶಾಲಾ ಮಕ್ಕಳ ಪೆÇೀಷಕರಿಗೆ ಇನ್ನು ಹೆಚ್ಚಿನ ಮಾಹಿತಿ ಹಾಗೂ ಅರಿವು ಮೂಡಿಸಬೇಕು. ಆಪ್ತ ಸಲಹಾ ಕೇಂದ್ರವು ಮಕ್ಕಳಲ್ಲಿರುವ ಮಾನಸಿಕ ತೊಂದರೆಗಳನ್ನು ಹೋಗಲಾಡಿಸಲು ಮತ್ತು ಪರಿಹರಿಸಲು ಅಗತ್ಯ ಕ್ರಮವಹಿಸಬೇಕು.

ಶಾಲೆಯಲ್ಲಿ ಮಾನಸಿಕ ಅಥವಾ ಡಿಪ್ರೆಷನ್‍ಗೆ ಒಳಗಾಗಿರುವ ಮಕ್ಕಳನ್ನು ಗುರುತಿಸಿ, ಅಂತವರಿಗೆ ವಿಶೇಷವಾಗಿ ಕೌನ್ಸಿಲಿಂಗ್ ಮಾಡಬೇಕು. ಈಗಾಗಲೇ ಸರ್ಕಾರದ ಆದೇಶದಂತೆ ನೋ ಬ್ಯಾಗ್ ಡೇ ದಿನದಂದು ಕಡ್ಡಾಯವಾಗಿ ಇತರ ಚಟುವಟಿಕೆಗಳನ್ನು ನಡೆಸುವ ಸಂದರ್ಭದಲ್ಲಿ ಒಂದು ಗಂಟೆ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಸೀಮಿತಗಳನ್ನು ಕಾಪಾಡಿಕೊಳ್ಳುವ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ತರಗತಿ ನಡೆಸಬೇಕು. ಮಾನಸಿಕ ಆರೋಗ್ಯ ಸದೃಡತೆಯ ಕುರಿತು ಮಕ್ಕಳಿಗೆ ಹೆಚ್ಚು ಅರಿವು ಮೂಡಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಅವರ ಮೂಲಕ ಕಾರ್ಯಗಾರ ನಡೆಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಸಾರ್ವಜನಿಕ ಶಿP್ಪ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸ್ರಚಿಸಿದ್ದಾರೆ.


Spread the love