ಮಗನ ಸಾವಿಗೆ ನ್ಯಾಯ ಕೋರಿ ಪೋಲಿಸ್ ಠಾಣೆ  ಎದುರು ಧರಣಿ

Spread the love

ಮಗನ ಸಾವಿಗೆ ನ್ಯಾಯ ಕೋರಿ ಪೋಲಿಸ್ ಠಾಣೆ  ಎದುರು ಧರಣಿ

ನಂಜನಗೂಡು: ಮಗನ  ಸಾವಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಪೋಲಿಸರು ವಿಫಲರಾಗಿದ್ದಾರೆಂದು ಹೆತ್ತವರು ಪೊಲೀಸ್ ಠಾಣೆ ಎದುರು ಧರಣಿ ಪ್ರತಿಭಟನೆ ನಡೆಸುತ್ತಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ  ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಎಂದಿನಂತೆ ಕೆಲಸ ಮುಗಿಸಿ ಬರುತ್ತಿದ್ದ, ಮಹೇಶ್ ಮತ್ತು ಸುಧಾ ಮಹೇಶ್ ದಂಪತಿ ಪುತ್ರ ಎನ್.ಎಂ.ಪ್ರವೀಣ್ ಗೆ  ಹಿಂಬದಿಯಿಂದ ಬಂದ ವಾಹನದಲ್ಲಿ ಬಂದ ,ದೀಪಕ್ ಜೈನ್ ಎಂಬಾತ ಡಿಕ್ಕಿ ಹೊಡೆದು ಪರಾರಿಯಾಗಿದ್ದನು.  ದೀಪಕ್ ಜೈನ್ ಎಂಬ ವ್ಯಕ್ತಿ ಯನ್ನು ಬಂಧಿಸಲು ಪೊಲೀಸರು ಎರಡೂವರೆ ವರ್ಷದಿಂದ ವಿಫಲ ರಾಗಿದ್ದರೆ,  ಯಾವ ಕಾರಣಕ್ಕೆ  ಪೋಲಿಸರು ಅಪರಾಧಿಯ ನ್ನು ಬಂಧಿಲು ಮೀನಾಮೇಷ ಎಣಿಸುತ್ತಿದ್ದಾರೆ ಎಂಬುದನ್ನು ಬಹಿರಂಗಗೊಳಿಸಲಿ ಎಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಹಲವಾರು ಬಾರಿ ಸಂಬಂಧಿಸಿದವರಿಗೆ ದೂರು ನೀಡಿದ್ದರೂ  ಬಂಧಿಸಿಲ್ಲ ಅಲ್ಲದೆ ಅಪಫಾತ ಸಮಯದಲ್ಲಿ ಕಾರಿನಲ್ಲಿ ಮಾದಕವಸ್ತುಗಳು ಪತ್ತೆಯಾಗಿದ್ದು, ಇದು ಪೋಲಿಸರ ಗಮನಕ್ಕೆ ಬಂದಿದೆ ಆದರೂ ಇದುವರೆಗೆ ನಮಗೆ ನ್ಯಾಯ ದೊರಕದ ಕಾರಣ  , ನ್ಯಾಯ ದೊರಕುವವರೆಗೆ ಪೊಲೀಸ್ ಠಾಣೆ ಎದುರು ಅಮರಣಾಂತ ಧರಣಿ ನಡೆಸುವುದಾಗಿ ಹೇಳಿದ್ದಾರೆ.

ಪ್ರತಿಭಟನೆ ಯಲ್ಲಿ  ಪೋಷಕರು ಹಾಗೂ ಬಿಜೆಪಿ ಮುಖಂಡ ಸತ್ಯನಾರಾಯಣ ಕದಂ, ಮಾಜಿನಗರಸಭಾ ಸದಸ್ಯ ಆನಂದ್, ಎ .ಮಹಾದೇವು,   ಮಾಜಿನಗರ ಸಭಾ ಸದಸ್ಯೆ ಮಂಗಳಮ್ಮ,‌ ಶ್ರೀಕಂಠೇಶ್ವರ‌ ದೇವಾಲಯ ನೌಕರರ ಸಂಘದ ಅದ್ಯಕ್ಷ ಶ್ರೀ ಕಂಠ, ನಂದಿನಿ, ರವಿಚಂದ್ರ, ಸೇರಿದಂತೆ ನಂಜನಗೂಡಿನ ಹಲವು ಪ್ರಗತಿಪರ  ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.


Spread the love