ಮಗಳ ನೆನಪಿನಲ್ಲಿ ಬಡವರ ಹೊಟ್ಟೆತಣಿಸಿದ ಶಿಕ್ಷಕ ದಂಪತಿ

Spread the love

ಮಗಳ ನೆನಪಿನಲ್ಲಿ ಬಡವರ ಹೊಟ್ಟೆತಣಿಸಿದ ಶಿಕ್ಷಕ ದಂಪತಿ

ಮೈಸೂರು: ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡಿರುವುದರಿಂದ ಬಡ, ನಿರ್ಗತಿಕರ ಬದುಕು ಸಂಕಷ್ಟಕ್ಕೀಡಾಗಿದೆ. ಇದನ್ನರಿತ ನಿವೃತ್ತ ಶಿಕ್ಷಕ ದಂಪತಿ ತಮ್ಮ ಮಗಳ ನೆನಪಾರ್ಥವಾಗಿ ಸುಮಾರು 130 ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆಯುವುದರೊಂದಿಗೆ ಮಗಳ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಿದ್ದಾರೆ.

ಲಾಕ್ ಡೌನ್ ಕಾರಣದಿಂದ ಬಡ ಕುಟುಂಬಗಳು ಕೆಲಸವಿಲ್ಲದೆ ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಅರಿತ ಬಸವೇಶ್ವರ ರಸ್ತೆ ನಿವಾಸಿ, ನಿವೃತ್ತ ಶಿಕ್ಷಕ ದಂಪತಿಯಾದ ಹೆಚ್.ವಿ ಮಹದೇವಸ್ವಾಮಿ ಮತ್ತು ಕೆ ಎಸ್.ಉಷಾ ಅವರು ತಮ್ಮ ಕೈಲಾದ ಸಹಾಯವನ್ನು ಮಾಡುವ ನಿರ್ಧಾರ ಮಾಡಿದ್ದು, ಅದರಂತೆ ತಮ್ಮ ಮಗಳು ಜೀವಿಕಾ ಅವರ ಮೂರನೇ ವರ್ಷದ ನೆನಪಿನಲ್ಲಿ ಆಹಾರ ಕಿಟ್ ಗಳನ್ನು ಬಡ ಕುಟುಂಬಗಳಿಗೆ ವಿತರಿಸಿ ಅವರ ಹಸಿದ ಹೊಟ್ಟೆಯನ್ನು ತಣ್ಣಗಾಗಿಸಿದ್ದಾರೆ.

ಈ ವೇಳೆ ನಗರಪಾಲಿಕೆ ಮಾಜಿ ಸದಸ್ಯ ಜಯಶಂಕರಸ್ವಾಮಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜು ಬಸಪ್ಪ, ಯುವ ಕಾಂಗ್ರೆಸ್ ಮುಖಂಡ ನವೀನ್ ಎಂ ಕೆಂಪಿ, ಮಹೇಶ್, ನಾಗೇಂದ್ರ ಬಾಬು ಇನ್ನಿತರರು ಇದ್ದರು


Spread the love