ಮಚ್ಚಟ್ಟು: ನದಿಯಲ್ಲಿ‌ ಸ್ನಾನಕ್ಕಿಳಿದ ವಿದ್ಯಾರ್ಥಿಗಳಿಬ್ಬರು ಮೃತ್ಯು

Spread the love

ಮಚ್ಚಟ್ಟು: ನದಿಯಲ್ಲಿ‌ ಸ್ನಾನಕ್ಕಿಳಿದ ವಿದ್ಯಾರ್ಥಿಗಳಿಬ್ಬರು ಮೃತ್ಯು

ಕುಂದಾಪುರ: ಸ್ನಾನಕ್ಕೆಂದು ನದಿಗೆ ಇಳಿದ ಸಂದರ್ಭ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರಿನ ಸೆಳೆತಕ್ಕೆ‌ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಮಚ್ಚಟ್ಟು ಕಳಿನಜೆಡ್ಡುವಿನಲ್ಲಿ ಸಂಭವಿಸಿದೆ.

ಉಳ್ಳೂರು-74 ನಿವಾಸಿಗಳಾದ ಸುಮಂತ ಮಡಿವಾಳ (18), ಗಣೇಶ್ (18) ಮೃತ ವಿದ್ಯಾರ್ಥಿಗಳು.

ಘಟನೆ ವಿವರ:
ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ನಡೆಸುತ್ತಿದ್ದ ಸುಮಂತ್ ಹಾಗೂ ಗಣೇಶ್ ಬಾಲ್ಯ ಸ್ನೇಹಿತರಾಗಿದ್ದು ಗುರುವಾರ ಮಧ್ಯಾಹ್ನದ ವೇಳೆಗೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಟ್ಟು ಸಮೀಪದ‌ ನದಿಗೆ ತೆರಳಿದ್ದರು. ಸ್ನಾನಕ್ಕೆಂದು ಇಬ್ಬರು ನೀರಿಗಿಳಿದ‌ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎನ್ಮಲಾಗಿದೆ. ಇದನ್ನು ಅಲ್ಲೇ‌ ಸಮೀಪದಲ್ಲೇ ಗಮನಿಸುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳೀಯರ ಜೊತೆಗೂಡಿ ರಕ್ಷಿಸಲು ಮುಂದಾದರಾದರೂ‌ ಅಷ್ಟರಲ್ಲಾಗಲೇ ಇಬ್ಬರು ಯುವಕರು ನೀರಿನಲ್ಲಿ‌ ಮುಳುಗಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love