ಮಟಪಾಡಿಯಲ್ಲಿ ಮನರಂಜಿಸಿದ ಯಕ್ಷಗಾನ ಗೊಂಬೆಯಾಟ

Spread the love

ಮಟಪಾಡಿಯಲ್ಲಿ ಮನರಂಜಿಸಿದ ಯಕ್ಷಗಾನ ಗೊಂಬೆಯಾಟ

ಬ್ರಹ್ಮಾವರ: ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟಪಾಡಿ ಬ್ರಹ್ಮಾವರ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನ ಕುದ್ರು ಕುಂದಾಪುರ ಇವರಿಂದ ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್‌ಮೆಮೋರಿಯಲ್‌ಯಕ್ಷಗಾನ ಗೊಂಬೆಯಾಟ ಟ್ರಸ್ಟ್‌ ಇದರ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್‌ಇವರ ಜನ್ಮ ಶತಮಾನೋತ್ಸವ ಪ್ರಯುಕ್ತ ಮಟಪಾಡಿ ಚಪ್ಟೇಗಾರ್‌ಸಭಾಭವನದಲ್ಲಿ ಚೂಡಾಮಣಿ ಲಂಕಾದಹನ ಯಕ್ಷಗಾನ ಗೊಂಬೆಯಾಟ ಪ್ರದರ್ಶನ ನಡೆಯಿತು.

ಯಕ್ಷಗಾನ ಪಾತ್ರಧಾರಿ ವೇಷ ತೊಟ್ಟ ಗೊಂಬೆಗಳನ್ನು ಸೂತ್ರದ ಮೂಲಕ ಕುಣಿಸಿದ ಸೂತ್ರಧಾರ ಪ್ರತಿ ಗೊಂಬೆಯ ಕುಣಿತಕ್ಕೆ ಆ ಕ್ಷಣದಲ್ಲಿ ವಿವರಗಳನ್ನು ನೀಡುತ್ತಾ ಹೋದರು.

ಗೊಂಬೆ ಕುಣಿತದ ವೇದಿಕೆಯಲ್ಲಿರುವ ಭಾಗವತರು, ಗೊಂಬೆಗಳ ಕುಣಿತಕ್ಕೆ ತಕ್ಕಂತೆ ಯಕ್ಷಗಾನ, ಪದ್ಯ ಹಾಡುವಾಗ ಚಂಡೆ, ಮದ್ದಳೆ, ತಾಳ, ಹಾರ್ಮೊನೀಯಮ್‌ ಒಳಗೊಂಡ ಹಿಮ್ಮೇಳದವರು ಸಾಥ್‌ನೀಡಿದರು. ಗೊಂಬೆಯಾಟ ಚಲಿಸುವ ಎಲ್ಲಾ ಭಾಗಗಳಿಗೆ ಸೂತ್ರ ಅಳವಡಿಸಿ ಅವೆಲ್ಲವನ್ನೂ ತನ್ನ ಕೈಯ್ಯಲ್ಲಿ ನಿಯಂತ್ರಿಸುತ್ತಾ ಅವುಗಳ ಕುಣಿತಕ್ಕೆ ಸೂತ್ರಧಾರ ತಾನೂ ಹೆಜ್ಜೆ ಹಾಕುವಾಗ ಕಿಕ್ಕಿರುದು ತುಂಬಿದ ಸಭಾಭವನದಲ್ಲಿನ ಪ್ರೇಕ್ಷಕರು ತನ್ಮಯರಾಗಿ ಗೊಂಬೆ ಕುಣಿತ ಆನಂದಿಸಿದರು,

ಗೊಂಬೆಯಾಟ ಪ್ರದರ್ಶನದ ಬಳಿಕ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನ ಕುದ್ರು ಕುಂದಾಪುರ ಇದರ ಉಸ್ತುವಾರಿ ಭಾಸ್ಕರ್‌ ಕಾಮತ್‌ಅವರಿಗೆ ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟಪಾಡಿ ಬ್ರಹ್ಮಾವರ ಇವರಿಂದ ಸನ್ಮಾನ ಕಾರ್ಯಕ್ರಮ ಜರುಗಿತು.

ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟಪಾಡಿ ಬ್ರಹ್ಮಾವರ ಗೌರವಾಧ್ಯಕ್ಷರಾದ ಚಂದ್ರಶೇಖರ ಕಲ್ಕೂರ, ಅಧ್ಯಕ್ಷರಾದ ಸ್ಯಾಮ್ಸನ್‌ಸಿಕ್ವೇರಾ, ಸೊರ್ಪು ಸದಾನಂದ ಪಾಟೀಲ್‌, ಸಂಘದ ಹಿರಿಯ ಕಿರಿಯ ಸದಸ್ಯರು ಪಾಲ್ಗೋಂಡಿದ್ದರು.

ಚೇತನ್‌ಮಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶರೋನ್‌ಸಿಕ್ವೇರಾ ಧನ್ಯವಾದ ಸಮರ್ಪಿಸಿದರು.


Spread the love