ಮಟಪಾಡಿಯ  ವಿವಿಧ ಕಡೆಗಳಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

Spread the love

ಮಟಪಾಡಿಯ  ವಿವಿಧ ಕಡೆಗಳಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

ಬ್ರಹ್ಮಾವರ ತಾಲೂಕಿನ ಮಟಪಾಡಿಯಲ್ಲಿ ವಿವಿಧ ಭಾಗದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಸ್ವರ್ಣ ಸೃತಿ ಯುವಕ ಮಂಡಲ ಮಟಪಾಡಿ ಮತ್ತು ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಟಪಾಡಿ ಸಿಕ್ವೇರಾ ವಠಾರದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಸಿವಿಲ್ ಕಂಟ್ರಾಕ್ಟರ್ ಚಂದ್ರ ಶೇಖರ್ ನಾಯರಿ ನೇರವೇರಿಸಿ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ರಾಯಲ್ ಬ್ರಹ್ಮಾವರ ಸಂಸ್ಥೆಯ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಆನ್ನಿ ಸಿಕ್ವೇರಾ, ಸ್ವರ್ಣ ಸೃತಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಕೆಪಿ ಇಬ್ರಾಹಿಂ ಹಾಗೂ ಅಧ್ಯಕ್ಷರಾದ ಸಂತೋಷ್ ಲೂಯಿಸ್ ಮತ್ತು ಫ್ರೆಂಡ್ಸ್ ಮಟಪಾಡಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಆಚಾರ್ಯ ಹಾಗೂ ಫ್ರೆಂಡ್ಸ್ ಮಟಪಾಡಿ ಸ್ವರ್ಣಸೃತಿ ಮಂಡಲದ ಪದಾಧಿಕಾರಿಗಳು ಸದಸ್ಯರು ಹಾಗೂ ಊರಿನ ಇತರ ಗಣ್ಯರು ಉಪಸ್ಥಿತರಿದ್ದರು

ಕಾರ್ಯಕ್ರಮ ನಿರೂಪಣೆಯನ್ನು ಚೇತನ್ ಪೂಜಾರಿ ಮಟಪಾಡಿ ಮಾಡಿದರು.

ಗ್ರೀನ್ ಪಾರ್ಕರ್ಸ್ ಯೂತ್ ಕ್ಲಬ್ ಬಲ್ಜಿ- ಮಟಪಾಡಿ

ಗ್ರೀನ್ ಪಾರ್ಕರ್ಸ್ ಯೂತ್ ಕ್ಲಬ್ ಬಲ್ಜಿ- ಮಟಪಾಡಿ ಮತ್ತು ಕೊಂಕಣ್ ರೈಲ್ವೇ ಎಲ್ ಸಿ 81 ಗೇಟ್ ಮಟಪಾಡಿ ಇವರ ವತಿಯಿಂದ ಮಟಪಾಡಿಯ ರೈಲ್ವೇ ಗೇಟ್ ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯನ್ನು ನಡೆಸಲಾಯಿತು.

ಸ್ಥಳೀಯ ಯಕ್ಷಗಾನ ಕಲಾವಿದ ಮತ್ತು ಭಾಗವತ ರಾಘವೇಂದ್ರ ಗಾಣಿಗ ಅವರು ಧ್ವಜಾರೋಹಣವನ್ನು ನೆರವೇರಿಸಿದರು.

ದಿನೇಶ್ ನಾಯಕ್ ಅವರು ಶುಭ ಸಂದೇಶವನ್ನು ನುಡಿದರು ಗ್ರೀನ್ ಪಾರ್ಕರ್ಸ್ ಯೂಥ್ ಕ್ಲಬ್ಬಿನ ಅಧ್ಯಕ್ಷ ಶ್ರೀನಿಧಿ ನಾಯಕ್ ರೈಲ್ವೆ ಸಿಬ್ಬಂದಿ ರವೀಂದ್ರ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು ಮಟಪಾಡಿ ರೈಲ್ವೆ ಗೇಟ್ ನ ಸಿಬ್ಬಂದಿಗಳು ಮತ್ತು ಗ್ರೀನ್ ಪಾರ್ಕರ್ಸ್ ಯೂಥ್ ಕ್ಲಬ್ಬಿನ ಸದಸ್ಯರು ಸ್ಥಳೀಯರು ಉಪಸ್ಥಿತರಿದ್ದರು

ಕಾರ್ಯಕ್ರಮ ನಿರೂಪಣೆಯನ್ನು ಚೇತನ್ ಪೂಜಾರಿ ಮಟಪಾಡಿ ಮಾಡಿದರು.

ಶ್ರೀನಿಕೇತನ ಪ್ರಾಥಮಿಕ ಶಾಲೆ ಮಟಪಾಡಿ
ಶ್ರೀನಿಕೇತನ ಪ್ರಾಥಮಿಕ ಶಾಲೆ ಮಟಪಾಡಿ ಸ್ವರ್ಣ ಸೃತಿ ಯುವಕ ಮಂಡಲ ಮಟಪಾಡಿ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಶಾಲಾ ವಠಾರದಲ್ಲಿ ಜರುಗಿತು.

ನಿವೃತ್ತ ಬಿ ಎಸ್ ಎನ್ ಎಲ್ ಮಹಾ ಪ್ರಬಂಧಕರಾದ ಎಂ ಚಂದ್ರಶೇಖರ ಕಲ್ಕೂರ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸ್ವರ್ಣ ಸೃತಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಕೆಪಿ ಇಬ್ರಾಹಿಂ ಹಾಗೂ ಅಧ್ಯಕ್ಷರಾದ ಸಂತೋಷ್ ಲೂಯಿಸ್, ಪ್ರಧಾನ ಕಾರ್ಯದರ್ಶಿ ಶರೋನ್ ಸಿಕ್ವೇರಾ ಮತ್ತು ಫ್ರೆಂಡ್ಸ್ ಮಟಪಾಡಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಆಚಾರ್ಯ ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ಶೆಟ್ಟಿ,  ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಪೂಜಾರಿ ಉಪಸ್ಥಿತರಿದ್ದರು.

ಬಳಿಕ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ, ನೃತ್ಯ, ಭಾಷಣ ಸ್ಪರ್ಧೆಗಳು ನಡೆಸಲಾಯಿತು.

ಸ್ವರ್ಣ ಸೃತಿ ಯುವಕ ಮಂಡಲದ ರಜತಮಹೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಡಿಕ್ಷನರಿಯನ್ನು ವಿತರಿಸಲಾಯಿತು ಮತ್ತು ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಅಧ್ಯಾಪಕರಾದ ಶಿವರಾಮ್ ನಡೆಸಿದರು.

ಮಟಪಾಡಿ ಮಸೀದಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ

ಮಟಪಾಡಿಯ ಮಸೀದಿಯಲ್ಲಿ ಕೂಡ ಮದರಸ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಮುಸ್ಲಿಂ ಬಾಂಧವರು ಸೇರಿಕೊಂಡು ಧ್ವಜಾರೋಹಣ ನಡೆಸುವುದರ ಮೂಲಕ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಣೆ ಮಾಡಿದರು.


Spread the love